‘ಮಕ್ಕಳಿಗೆ ಭರತನಾಟ್ಯ ಕಲಿಸಿ’
ನೃತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯ ಪರಿಹಾರ ಆಯೋಗದ ಉಸ್ತುವಾರಿ ಅಧ್ಯಕ್ಷೆ ಮಾಲತಿ ಎಸ್. ರಷ್ಮಿ ‘ಮಕ್ಕಳಿಗೆ ಅಂಕಗಳ ಗಳಿಕೆಯ ಶಿಕ್ಷಣದ ಜತೆಗೆ ನಮ್ಮ ಪರಂಪರೆಯನ್ನು ಪ್ರತಿನಿಧಿಸುವ ಭರತನಾಟ್ಯದಂತಹ ಶಿಕ್ಷಣ ಅವಶ್ಯವಿದೆ’ ಎಂದರು. ಸೋಲಾಪುರದ ಕಥಕ್ ನೃತ್ಯ ಕಲಾವಿದ ಮಹೇಶ ಪಾಟ್ಕೂಲ್ಕರ್ ಅವರಿಗೆ ‘ನ್ಯಾಟ್ಯಾಂಜಲಿ’ ಹಾಗೂ ತಬಲವಾದಕ ವಿಶ್ವಜಿತ್ ಜೋಗ್ದಂಡ್ ಅವರಿಗೆ ‘ವಾದ್ಯ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.