ಕಲಬುರಗಿ: ‘ಚಿದಂಬರ ಶ್ರೀಗಳು, ಭಕ್ತರ ಭಾಗ್ಯ ಬದಲಿಸಿದ ಮಹಾಮಹಿಮರು. ಅವರು ಶಿವ ಮತ್ತು ವಿಷ್ಣುವಿನ ಅವತಾರವಾಗಿದ್ದಾರೆ’ ಎಂದು ಯೋಗೀಶ್ವರ ಯಜ್ಞವಲ್ಕ್ಯ ಸಮಿತಿ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ಹೇಳಿದ್ದಾರೆ.

ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದ ಯಜ್ಞವಲ್ಕ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿದಂಬರ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಚಿದಂಬರರು ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿ ಜನಿಸಿ, ಅಲ್ಲಿಯೇ ತಮ್ಮ ಅವತಾರ ಸಮಾಪ್ತಿಗೊಳಿಸಿದರು’ ಎಂದು ಹೇಳಿದರು.

ರಾಮಾಚಾರ್ಯ, ಹರೀಶಾಚಾರ್ಯ ಮತ್ತು ಸಂಜಯ ಆಚಾರ ಸನ್ನತಿ ಅವರ ವೈದಿಕತ್ವದಲ್ಲಿ ಬೆಳಿಗ್ಗೆ ಕಾಕಡ ಆರತಿ, ಜನ್ಮೋತ್ಸವ, ಸತ್ಯ ಚಿದಂಬರಂ ಕಥೆ ಮತ್ತು ಭಜನೆ, ಮಹಾ ಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಚಾಲಕ ದಯಾಘನ ಧಾರವಾಡಕರ, ಚಂದ್ರಕಾಂತ ಗದಾರ, ಶಾಮಾಚಾರ್ಯ ಬೈಚಬಾಳ, ಅಶೋಕ ಮಳ್ಳಿ, ದತ್ತಾತ್ರೇಯ ಸಬ್ನವೀಸ್, ಭೀಮರಾವ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಶಾಮಾಚಾರ್ಯ ಜೋಶಿ ವನದುರ್ಗ, ವಿನುತ ಜೋಶಿ, ಸುಧೀರ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಹನುಮಂತರಾವ ತಂಗಡಗಿ, ಅನಿಲ ಚಿತ್ತಾಪುರ, ಪ್ರಸನ್ನ ದೇಶಪಾಂಡೆ, ಪಾಂಡುರಂಗ ಜೋಶಿ, ಅನಂತರಾವ ಕುಲಕರ್ಣಿ, ಅವಧೂತ ಕುಲಕರ್ಣಿ, ಮಂದರ ಸರಾಫ್, ಸಾಗರ್ ಅಳಂದಕರ ಹಾಗೂ ಮೈತ್ರಿ ಭಜನಾ ಮಂಡಳಿಯ ಮಾತೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.