ಆಳಂದ (ಕಲಬುರ್ಗಿ ಜಿಲ್ಲೆ): ಗುರುವಾರ ರಾತ್ರಿ ಕಲಬುರ್ಗಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಅಫಜಲಪುರ ಜೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸಿದ್ದರಾಮ ದಾನಪ್ಪ ಅವಟೆ (28) ಅವರ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ರಾತ್ರಿ ತಾಲ್ಲೂಕಿನ ವೈಜಾಪುರ-ಬೊಮ್ಮನಹಳ್ಳಿ ಮಧ್ಯದ ಹಳ್ಳದಲ್ಲಿ ಕಾರು ದಾಟಿಸುವ ಯತ್ನದಲ್ಲಿದ್ದಾಗ ಕೊಚ್ಚಿಕೊಂಡು ಹೋಗಿದ್ದರು.

ಕತ್ತಲು ಹಾಗೂ ಧಾರಾಕಾರ ಮಳೆಯಲ್ಲೇ ಪೊಲೀಸರಿ ಶೋಧ ಕಾರ್ಯ ಆರಂಭಿಸಿದರು. ಆದರೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಹಳ್ಳದಲ್ಲಿ ಶವ ಪತ್ತೆಯಾಯಿತು.

ಯಳಸಂಗಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರೊಂದಿಗೆ ಕಾರಿನಲ್ಲಿದ್ದ ರಾಜಶೇಖರ ಕುಂಬಾರ ಅವರನ್ನು ಗುರುವಾರ ರಾತ್ರಿ ರಕ್ಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.