ಕಲಬುರಗಿ: ವಿಜಯದಶಮಿ ಆರಂಭದಲ್ಲಿ ‘ಸದ್ಯ ಬೆಲೆ ಕಡಿಮೆ ಇದೆಯಪ್ಪಾ’ ಎಂದು ನಿತ್ಯ ಪೂಜೆಗೆ ಹೂವು ಖರೀದಿಸುತ್ತಿದ್ದ ಜನ, ಈಗ ‘ಒಂದ ವಾರದಾಗ ಎಷ್ಟ ರೇಟ್ ಹೆಚ್ಚಾಗೇತೆಲ್ಲ’ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದೆ.

ಅಲ್ಲದೆ ಹಬ್ಬದ ಹತ್ತೂ ದಿನ ನಿತ್ಯ ಬೆಳ್ಳಿಗೆ ಮತ್ತು ಸಂಜೆ ಪೂಜೆಗಳ ಬಳಿಕ ಅಗತ್ಯವಾಗಿ ಬೇಕಾಗುವ ತೆಂಗಿನಕಾಯಿ ದರ ಬಹುತೇಕ ದುಪ್ಪಟ್ಟಾಗಿದೆ. ಕಳೆದ ತಿಂಗಳು ಒಂದು ತೆಂಗಿನಕಾಯಿಗೆ ₹15–₹20 ಇತ್ತು. ಸದ್ಯ ₹25–₹40ಕ್ಕೆ (ಗಾತ್ರದ ಆಧಾರದಲ್ಲಿ) ತಲುಪಿದೆ.

ಹಣ್ಣುಗಳ ಬೆಲೆ: ಮಾರುಕಟ್ಟೆಯಲ್ಲಿ ಅತಿ ಕಡಿಮೆ ಕಂಡುಬರುವ ಏಲಕ್ಕಿ ಬಾಳೆ ಕೆ.ಜಿ ₹80 ಇದ್ದರೆ, ಪಚ್ಚಬಾಳೆ ದರ ಡಜನ್ಗೆ ₹40–₹50 ಇದೆ.

ಸದ್ಯ ಮಾರುಕಟ್ಟೆಯಲ್ಲಿ ಪೇರಲ ಮತ್ತು ಸೇಬು, ಸೀತಾಫಲ ಹಣ್ಣುಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇವುಗಳ ಬೆಲೆ ಕ್ರಮವಾಗಿ ಪೇರಲ ಹಣ್ಣು ಕೆ.ಜಿಗೆ ₹60 ಮತ್ತು ₹120 ಇದೆ. ಸೀತಾಫಲ ಹಣ್ಣುಗಳನ್ನು ಬಿಡಿಯಾಗಿಯೂ ಖರೀದಿಸಲಾಗುತ್ತಿದೆ. ಉಳಿದಂತೆ; ದಾಳಿಂಬೆ ₹120, ಕರ್ಜೂರ ₹70 ಇದೆ. ₹100ಕ್ಕೆ 2–3 ಪಪ್ಪಾಯ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. (ಗಾತ್ರ, ತಾಜಾತನ, ಮಾರುಕಟ್ಟೆ ಆಧಾರದಲ್ಲಿ ಬೆಲೆ). ಸೂಪರ್ ಮಾರುಕಟ್ಟೆಯಲ್ಲಿ ಬಹುತೇಕರು ಹಣ್ಣುಗಳನ್ನು ₹100, ₹50 ಲೆಕ್ಕದಲ್ಲಿ ಖರೀದಿಸುತ್ತಿರುವುದು ಕಂಡು ಬಂತು.

ಹೂವುಗಳ ಬೆಲೆ: ಶ್ರಾವಣಕ್ಕೆ ಹೋಲಿಸಿದರೆ ವಿಜಯದಶಮಿಯಲ್ಲಿ ಹೂವುಗಳ ಬೆಲೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಕಂಡುಬಂದಿಲ್ಲ.

ಮನೆ ಮತ್ತು ಪೂಜೆ ಕೋಣೆ ಅಲಂಕಾರಕ್ಕೆ ಅಗತ್ಯವಾಗಿ ಬೇಕಾಗುವ ಕೇಸರಿ ಬಣ್ಣದ ಚಂಡು ಹೂವುಗಳ ಬೆಲೆ ₹60–70 ಇದ್ದರೆ ಹಳದಿ ಬಣ್ಣದ ಚಂಡು ಹೂವುಗಳು ₹50–60 ನಂತೆ ಮಾರಾಟವಾಗುತ್ತಿವೆ. ಕೆ.ಜಿ ಕಟ್ ರೋಸ್ಗೆ ₹100–₹120 ಇದೆ. ಕಡ್ಡಿ ಇರುವ ಒಂದು ತಾಜಾ ಗುಲಾಬಿ ಬೆಲೆ ₹15–₹20 ಇದೆ.

ಉಡಿ ತುಂಬಲು, ಕುಂಭ–ಕಳಸಕ್ಕೆ ಇಡಲು ಬೇಕಾಗುವ ಎಲೆಗಳ ಬೆಲೆ 100ಕ್ಕೆ ₹60–₹70 ಇದೆ. ನಗರದ ಸುತ್ತಲಿನ ಗ್ರಾಮಗಳ ಜನರು ಮಾವಿನ ಎಲೆಗಳನ್ನು ಹಿಡಿಗಳ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ.

ನನ್ನ ಇಬ್ಬರು ಮಕ್ಕಳಿಗೆ ಆನ್ಲೈನ್ನಲ್ಲಿ ನವರಾತ್ರಿಯ ಎಲ್ಲ ಬಣ್ಣದ ಬಟ್ಟೆಗಳನ್ನೂ ತರಿಸಿದ್ದೆ. ಸ್ಥಳೀಯ ಮಾರುಕಟ್ಟೆಗೆ ಹೋಲಿಸಿದರೆ ಆನ್ಲೈನ್ನಲ್ಲಿ ಕಮ್ಮಿ ಇರುತ್ತದೆ
ಮುಕ್ತಾ ಗೃಹಿಣಿ

ನಮ್ಮ ಮನೆಯಲ್ಲಿ ದೇವಿ ಪುರಾಣ ಹಚ್ಚಿದ್ದರಿಂದ ಹತ್ತು ದಿನ ಎರಡೂ ಹೊತ್ತು ಪೂಜೆ ನಡೆಯುತ್ತದೆ. ಹೀಗಾಗಿ ತೆಂಗಿಕಾಯಿ ಅಗತ್ಯ. 25 ಕಾಯಿಗಳನ್ನು ಹೊಲ್ಸೆಲ್ ದರದಲ್ಲೇ ಖರೀದಿಸಿದ್ದೆ
ಮಲ್ಲೇಶಪ್ಪ ನಿವೃತ್ತ ನೌಕರ

ತೆಂಗಿನಕಾಯಿಯ ಸಗಟು ದರವೇ ಹೆಚ್ಚಾಗಿದ್ದರಿಂದ ಸಹಜವಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದೆ. ದೀಪಾವಳಿ ಬಳಿಕವೇ ಕಡಿಮೆಯಾಗುವ ಸಾಧ್ಯತೆ ಇದೆ
ತೆಂಗಿನಕಾಯಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.