ಮೈಸೂರು: ಮೈಸೂರು ಭಾಗದ ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಉಳಿದ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಹಲವೆಡೆ ಮನೆಯ ಗೋಡೆಗಳು ಕುಸಿಯುತ್ತಿವೆ. ಮಡಿಕೇರಿ, ಸುಂಟಿಕೊಪ್ಪ ಹಾಗೂ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಾಚನಾಯಕನಹಳ್ಳಿ ತೊರೆಯ ಹಳ್ಳದ ಚೆಕ್ ಡ್ಯಾಂಗೆ ಹೆಚ್ಚಿನ ನೀರು ಹರಿದು ಇರಕನಘಟ್ಟ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ.

ಗೋಣಿಕೊಪ್ಪಲಿನಲ್ಲಿ ಪ್ರಾಥಮಿಕ–ಪೌಢಶಾಲಾ ಹಂತದ ಮೈಸೂರು ವಿಭಾಗ ಮಟ್ಟದ ಹಾಕಿ ಪಂದ್ಯಾವಳಿ ನಡೆಯುತ್ತಿದ್ದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನವನ್ನು ಆವರಿಸಿದ್ದ ನೀರನ್ನು ಹೊರಹಾಕಲು ಆಯೋಜಕರು ಪರದಾಡಿದರು. ಶನಿವಾರಸಂತೆಯಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಭಾರಿ ಮಳೆಯಾಗಿದೆ.

ಸುಂಟಿಕೊಪ್ಪದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಹೊಸ ಬಡಾವಣೆಗಳಿಂದ ಕೆಸರು ಮಿಶ್ರಿತ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ‘ಕ್ರಮ ಕೈಗೊಳ್ಳಲಿಲ್ಲ’ ಎಂದು ದೂರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತಲಕಾಡಿನ 3ನೇ ವಾರ್ಡ್ ನಿವಾಸಿ ರತ್ನಮ್ಮ ಅವರ ಮನೆ ಗೋಡೆ ಬುಧವಾರ, ನಂಜನಗೂಡು ತಾಲ್ಲೂಕಿನ ನಗರ್ಲೆಯಲ್ಲಿ ಜವನಮ್ಮ ಅವರ ಮನೆಯ ಗೋಡೆ ಗುರುವಾರ ಕುಸಿದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪದ ಜೋಗನಹಳ್ಳಿಯ ರೈತ ಸುರೇಶ್ ಅವರ ಮನೆಯಲ್ಲಿ ಹದ ಮಾಡಿಟ್ಟಿದ್ದ ತಂಬಾಕು ಬೆಳೆಗೆ ಹಾನಿಯಾಗಿದೆ. ಎಚ್.ಡಿ. ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯ ಅಂಗನವಾಡಿ ಕಟ್ಟಡದ ಚಾವಣಿ ಗಾರೆ ಉದುರುತ್ತಿದ್ದು, ಪೋಷಕರು ಮಕ್ಕಳನ್ನು ಕಳಿಸಿಲ್ಲ.

ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಮಣ್ಣಿನ ಗೋಡೆಯ ಆರು ಮನೆಗಳು ಕುಸಿದಿವೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹಳೇ ಕೇರಳಾಪುರದ ಮೂರು ಮನೆಗಳಿಗೆ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.