ಕನಕಗಿರಿ (ಕೊಪ್ಪಳ ಜಿಲ್ಲೆ): ದೂರವಾಣಿ ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ಗರ್ಭಿಣಿ ಹಾಗೂ ಅವರ ಸಂಬಂಧಿಕರು ಆಟೊದಲ್ಲಿ ಆಸ್ಪತ್ರೆಗೆ ಬಂದ ಘಟನೆ ಮಂಗಳವಾರ ನಡೆದಿದೆ.

ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ಅಂಬಿಕಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಹೋದರ ನಾಗರಾಜ ಹೊಸಗುಡ್ಡ ಅವರು ಆ್ಯಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಸಿಬ್ಬಂದಿ ಹುಲಿಹೈದರ ಗ್ರಾಮಕ್ಕೆ ವಾಹನ ಬರಲು ಒಂದೂವರೆ ತಾಸು ಬೇಕಾಗುತ್ತದೆ. ಅಲ್ಲಿಯವರೆಗೆ ಕಾಯಬೇಕು ಅಂತ ಉತ್ತರಿಸಿದ್ದಾರೆ.

ಹೆರಿಗೆ ನೋವು ಹೆಚ್ಚಾಗಿದ್ದರಿಂದ ಕುಟುಂಬದವರು ಬೇರೆ ದಾರಿ ಇಲ್ಲದೆ ಆಟೊದಲ್ಲಿ ಗರ್ಭಿಣಿಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಅಂಬಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸಂಬಂಧಿ ನಾಗರಾಜ ಹೊಸಗುಡ್ಡ 'ಪ್ರಜಾವಾಣಿ'ಗೆ ತಿಳಿಸಿದರು.

ಡಿ. 7ರಂದು ಅಣ್ಣನ ಮಗಳು ಶಿವಲೀಲಾ ಅವರ ಹೆರಿಗೆಗಾಗಿ ಕರೆ ಮಾಡಿದಾಗಲೂ ಸಹ ಆ್ಯಂಬುಲೆನ್ಸ್ ಬರಲಿಲ್ಲ. ಆಗಲೂ ಆಟೊದಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದರು.

ಇದು ಬಹುತೇಕ ಗ್ರಾಮಗಳ ಬಡ ಜನರ ನೋವಿನ ಕಥೆಯಾಗಿದೆ, ತುರ್ತು ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ನೋವು ತೋಡಿಕೊಂಡರು.

ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ರತ್ನಂ ಪಾಂಡೆಯೆ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಆ್ಯಂಬುಲೆನ್ಸ್ ವಿಳಂಬದ ಕುರಿತು ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.