ಜನರ ರಕ್ತದ ಮಾದರಿಗಳಲ್ಲಿ ಡೆಂಗೆ ಚಿಕುನ್‌ಗುನ್ಯಾ ನೆಗೆಟಿವ್ ವರದಿ ಬಂದಿದ್ದು ವೈರಲ್‌ಫೀವರ್ ಸೋಂಕು ಉಂಟಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಿಸುವುದಕ್ಕೆ ಆರೋಗ್ಯ ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ.
ಡಾ.ಆನಂದ ಗೋಟೂರು ತಾಲ್ಲೂಕು ಆರೋಗ್ಯ ಅಧಿಕಾರಿ
ಸ್ವಚ್ಛತೆಗೆ ಜನ ಸಹಕರಿಸಬೇಕಿದೆ. ಹಲವರು ಗುಂಡಿಯಲ್ಲಿ ನಳದ ಸಂಪರ್ಕ ಹೊಂದಿದ್ದು ಕೊಳಚೆ ಪುನಃ ನಲ್ಲಿಯೊಳಗೇ ಸೇರುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದೇವೆ.
ಶೇಖರಪ್ಪ ಹರಿಜನ ಕಂದಕೂರು ಗ್ರಾ.ಪಂ ಅಧ್ಯಕ್ಷ
‘ಜೆಜೆಎಂ ಅಧ್ವಾನ ಅಶುದ್ಧ ನೀರು’
ಗ್ರಾಮದಲ್ಲಿ ಜೆಜೆಎಂ ಯೋಜನೆ ಅಧ್ವಾನಗೊಂಡಿದ್ದು ಕೊಳವೆಗಳನ್ನೇ ಜೋಡಿಸಿಲ್ಲ. ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪವಿದ್ದು ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ಆರ್‌ಒ ಘಟಕ ದೂರದಲ್ಲಿದ್ದು ಮಹಿಳೆಯರು ವೃದ್ಧರಿಗೆ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಘಟಕವನ್ನು ಊರಿಗೆ ಸ್ಥಳಾಂತರಿಸಬೇಕೆಂಬ ಜನರ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಕುಡಿಯಲು ಯೋಗ್ಯವಲ್ಲದ ಮತ್ತು ಅತ್ಯಧಿಕ ಫ್ಲೋರೈಡ್ ಅಂಶ ಹೊಂದಿರುವ ಕೊಳವೆಬಾವಿ ನೀರನ್ನೇ ಬಳಸುತ್ತಿದ್ದು ಇದೂ ಸಹ ಅನಾರೋಗ್ಯಕ್ಕೆ ಕಾರಣವಾಗಿದೆ. ಜನರಿಗೆ ಎದ್ದೇಳುವುದಕ್ಕೂ ಸಮಸ್ಯೆಯಾಗಿದ್ದು ಬಹಿರ್ದೆಸೆಗೆ ಹೊತ್ತುಕೊಂಡು ಹೋಗಬೇಕಿದೆ. ಚಿಕಿತ್ಸಾ ಕೇಂದ್ರಕ್ಕೆ ಗಾಲಿ ಕುರ್ಚಿಯ ಮೇಲೆ ಕರೆತರುತ್ತಿದ್ದೇವೆ ಎಂದು ಜನ ಹೇಳಿದರು. ಈ ಊರು ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ಒಬ್ಬ ಹಿರಿಯ ಅಧಿಕಾರಿಯೂ ಈ ಊರಿಗೆ ಭೇಟಿ ನೀಡದಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದರು.