ಕೊಪ್ಪಳ: ಕಳೆದ ತಿಂಗಳು ಕಾಡಿದ ಮಳೆ ಇತ್ತೀಚೆಗೆ ಬಿಡುವು ನೀಡಿದ್ದು ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಬುಧವಾರದ ಅಂತ್ಯಕ್ಕೆ ಶೇ. 68.33ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1,69,810 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು ಈಗಾಗಲೇ 1,16,030 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ರೈತರಿಗೆ ಸಂಕಷ್ಟ ಕಾಡಿತ್ತು. ಈ ಬಾರಿ ಮುಂಗಾರು ಹಂಗಾಮಿನಿಂದಲೇ ಉತ್ತಮ ಮಳೆ ಸುರಿದಿದ್ದು ಅನ್ನದಾತರಿಗೆ ವರವಾಯಿತು.

ಆದರೆ ಕಳೆದ ತಿಂಗಳು ಸುರಿದ ವಾಡಿಕೆಗಿಂತಲೂ ಹೆಚ್ಚಿನ ಮಳೆಗೆ ಸಾಕಷ್ಟು ಬೆಳೆಗಳು ಹಾಳಾಗಿದ್ದವು. ಕಾರಟಗಿ, ಗಂಗಾವತಿ ಭಾಗದಲ್ಲಿ ಭತ್ತ, ಕುಕನೂರು, ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮೆಕ್ಕಜೋಳ, ಉಳ್ಳಾಗಡ್ಡಿ ನೀರು ಪಾಲಾಗಿದ್ದವು.

ನಿರಂತರವಾಗಿ ಸುರಿದ ಮಳೆ ಹಿಂಗಾರು ಕೃಷಿ ಚಟುವಟಿಕೆಗೂ ಹಿನ್ನಡೆ ಉಂಟು ಮಾಡಿತ್ತು. ಹಲವು ದಿನಗಳಿಂದ ಮಳೆ ಬಿಡುವು ನೀಡಿದ್ದು ರೈತರಲ್ಲಿ ಖುಷಿ ಮೂಡಿದೆ. ಏಕದಳ ಧಾನ್ಯಗಳಾದ ಜೋಳ 22,560 ಹೆಕ್ಟೇರ್, ಮೆಕ್ಕಜೋಳ 2,180, ಸಜ್ಜೆ 60, ಗೋಧಿ 2,870, ದ್ವಿದಳ ಬೆಳೆಗಳಾದ ಕಡಲೆ 76,580, ಅಲಸಂದಿ 860 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹಿಂಗಾರಿನಲ್ಲಿ ಹುರಳಿ ಬಿತ್ತನೆ ಗುರಿ 3,500 ಹೆಕ್ಟೇರ್ ಇದ್ದರೂ ಬಿತ್ತನೆ ಪ್ರಮಾಣ ಮಾತ್ರ ಶೂನ್ಯವಾಗಿದೆ. ಸೂರ್ಯಕಾಂತಿ, ಕುಸುಬೆ, ಅಗಸೆ ಹಾಗೂ ಶೇಂಗಾ ಬಿತ್ತನೆಯೂ ಕಡಿಮೆಯಾಗಿದೆ. ಶೇಂಗಾ ಬಿತ್ತನೆ ಒಟ್ಟು ಗುರಿ 34 ಸಾವಿರ ಹೆಕ್ಟೇರ್ ಇದ್ದರೆ ಇದುವರೆಗೆ ಬಿತ್ತನೆಯಾಗಿದ್ದು 10,340 ಹೆಕ್ಟೇರ್ ಮಾತ್ರ. ರಾಜ್ಯದಲ್ಲಿ ಭತ್ತದ ಕಣಜ ಎಂದೇ ಹೆಸರಾದ ಗಂಗಾವತಿ ಹಾಗೂ ಕಾರಟಗಿ ಭಾಗದಲ್ಲಿ ಭತ್ತದ ಫಸಲು ಕಟಾವಿಗೆ ಸಿದ್ಧಗೊಳ್ಳುತ್ತಿದೆ.

ಹಿಂದಿನ ವರ್ಷ ಮಳೆ ಕೊರತೆ ಕಾಡಿದ್ದರಿಂದ ರೈತರು ಬರಗಾಲದ ಸಂಕಷ್ಟ ಎದುರಿಸಿದ್ದರು. ಈ ಬಾರಿ ಹಿಂದಿನ ರೀತಿ ಸಮಸ್ಯೆಯಾಗಲಿಲ್ಲ. ಹಿರೇಹಳ್ಳ ಜಲಾಶಯ ತುಂಬಿ ನೀರು ಹೊರಗಡೆ ಬಿಟ್ಟಿದ್ದರಿಂದ ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಉಳ್ಳಾಗಡ್ಡಿಗೆ ಹಾನಿಯಾಗಿತ್ತು. ಇದಾದ ಬಳಿಕವೂ ಹೊಲ ಹರಗಿಕೊಂಡು ಹಲವು ರೈತರ ಹಿಂಗಾರಿಗೆ ಕೃಷಿಗೆ ಸಜ್ಜಾಗುತ್ತಿರುವ ಚಿತ್ರಣ ಅಳವಂಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಂಡು ಬರುತ್ತಿದೆ.

ಕಳೆದ ತಿಂಗಳು ಮಳೆಯಾಗಿದ್ದರಿಂದ ಹಿಂಗಾರು ಬಿತ್ತನೆ ವಿಳಂಬವಾಗಿತ್ತು. ಈಗ ಚುರುಕು ಪಡೆದುಕೊಂಡಿದ್ದು ರೈತರು ಸಕ್ರಿಯವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
–ರುದ್ರೇಶಪ್ಪ ಟಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.