ಕುಷ್ಟಗಿ: ಹಿಂಗಾರು ಬೆಳೆಯೆಂದರೆ ಬಿಳಿಜೋಳ, ಕಡಲೆ, ಗೋಧಿ, ಕುಸುಬೆ ಹೀಗೆ ವಿವಿಧ ಬೆಳೆಗಳ ಹಸಿರು ಹೊದ್ದ ಎರೆ (ಕಪ್ಪು) ಹೊಲಗಳ ಚಿತ್ರಣ ಕಣ್ಮುಂದೆ ಬರುತ್ತದೆ. ಇದು ಹಿಂದಿನ ದಿನಗಳಲ್ಲಿನ ಸಾಮಾನ್ಯ ಚಿತ್ರಣ. ಆದರೆ ಈ ಬಾರಿ ಎರೆ ಹೊಲಗಳ ಬೆಳೆ ಪರಿಸ್ಥಿತಿಯಲ್ಲಿನ ಬದಲಾವಣೆ ಗಮನಾರ್ಹವಾಗಿದೆ. ಕಾರಣ ಇಷ್ಟೆ, ಕಡಲೆ ಬೆಳೆಯುವ ಪ್ರದೇಶದಲ್ಲಿ ಪ್ರಮುಖ ಬೇಳೆಕಾಳು ಬೆಳೆ ತೊಗರಿ ಕಡಲೆಗೆ ಪರ್ಯಾಯವಾಗಿ ಪೈಪೋಟಿ ನೀಡಿದೆ. ಎರೆ ಮಣ್ಣಿನ ಜಮೀನುಗಳು ಈಗ ತೊಗರಿ ಕಾಯಿ ಮತ್ತು ಅರಿಸಿಣ ಬಣ್ಣದ ಹೂವುಗಳಿಂದ ಓಲಾಡುತ್ತಿರುವುದು ಕಂಡುಬರುತ್ತಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹದವರಿತ ಮಳೆ, ಉತ್ತಮ ತೇವಾಂಶ ಮತ್ತು ವಾತಾವರಣದಿಂದ ಹಿಂಗಾರು ಹಂಗಾಮಿನ ವಾಣಿಜ್ಯ ಮತ್ತು ಬೇಳೆಕಾಳು ಬೆಳೆಯಾಗಿರುವ ಕಡಲೆ, ಜೋಳದ ಬೆಳೆಗಳು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ. ಅದರ ಜೊತೆಗೆ ಕುಷ್ಟಗಿ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿಯ ತೊಗರಿ ಬೆಳೆ ಬಿತ್ತನೆ ಪ್ರದೇಶ ಈ ಹಿಂದಿಗಿಂತಲೂ ಮೂರು ಪಟ್ಟು ಹೆಚ್ಚಿದೆ. ಅದೇ ರೀತಿ ಎರೆ ಜಮೀನಿನಲ್ಲಿ ಅಪರೂಪವಾಗಿರುತ್ತಿದ್ದ ತೊಗರಿ ಈಗ ಪ್ರಮುಖ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ತೊಗರಿ ಹೊಲಗಳೇ ಗೋಚರಿಸುತ್ತಿದ್ದು, ಕೃಷಿ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ಈ ತಾಲ್ಲೂಕಿನಲ್ಲಿ ಹಿಂಗಾರು ಕಡಲೆ ಬೆಳೆಯ ಬಿತ್ತನೆ ಪ್ರದೇಶ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹೂವು ಕಾಯಿಗಳ ಭಾರಕ್ಕೆ ತೊಗರಿ ಗಿಡಗಳು ಇಳಿಬಿದ್ದಿವೆ. ಇದೇ ಸ್ಥಿತಿ ಮುಂದೆಯೂ ಇದ್ದರೆ ಈ ಬಾರಿ ರೈತರು ದಾಖಲೆ ಪ್ರಮಾಣದಲ್ಲಿ ತೊಗರಿ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಕಡಲೆ, ಜೋಳ, ಗೋಧಿ ಬೆಳೆಗಳೂ ಉತ್ತಮ ರೀತಿಯಲ್ಲಿರುವುದರಿಂದ ಗೊಣಗಾಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ರೈತರು.

ಹಿಂಗಾರು ಬಿತ್ತನೆ ಆರಂಭದಲ್ಲಿ ಮಳೆ ನಿರಂತರವಾಗಿ ಸುರಿದಿದ್ದರಿಂದ ಬಿತ್ತನೆಗೆ ಅಡ್ಡಿಯಾಗಿತ್ತು. ನಂತರ ಬಿಡುವು ನೀಡಿದ್ದರಿಂದ ಪೂರ್ಣಪ್ರಮಾಣದಲ್ಲಿ ಕಡಲೆ, ಜೋಳ ಬಿತ್ತನೆ ನಡೆಸಲಾಗಿದೆ. ಆದರೆ ಈ ಬೆಳೆಗಳ ಬಿತ್ತನೆ ಪ್ರದೇಶ ಕಡಿಮೆ ಇರುವುದು, ತೊಗರಿ ಬೆಳೆಯೇ ಹೆಚ್ಚಾಗಿರುವುದರಿಂದ ಬಹಳಷ್ಟು ಸಂಖ್ಯೆ ರೈತರಿಗೆ ಅನುಕೂಲವೇ ಆಗಿದೆ. ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು ಯಲಬುರ್ಗಾ, ಕುಕನೂರು ತಾಲ್ಲೂಕುಗಳಲ್ಲಿ ಮತ್ತು ಅಳವಂಡಿ ಭಾಗದಲ್ಲಿ. ಏಕೆಂದರೆ ಮುಂಚಿತವಾಗಿ ಬಿತ್ತನೆಯಾಗಿದ್ದ ಕಡಲೆ, ಜೋಳ ಇತರೆ ಬೆಳೆಗಳ ಬೀಜಗಳು ಮೊಳಕೆಯೊಡೆದರೂ ಹೆಚ್ಚಿನ ತೇವಾಂಶದಿಂದ ಹಾಳಾಗಿದ್ದವು. ಮಳೆ ಬಿಡುವು ನೀಡಿದ ನಂತರ ಪುನಃ ಬಿತ್ತನೆಯಾಗಿದ್ದು ಆ ಭಾಗದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಆದರೆ ಉತ್ತಮ ಬೆಳೆಗಳು ರೈತರಲ್ಲಿ ಆಶಾಭಾವನೆ ಮೂಡಿಸಿವೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಉತ್ತಮ ದರ, ತೊಗರಿಯತ್ತ ಒಲವು: ಪ್ರತಿವರ್ಷ ಒಂದೇ ರೀತಿಯ ಬೆಳೆ ಬೆಳೆಯುವುದರಿಂದ ಭೂಮಿಯಲ್ಲಿ ನಿರ್ದಿಷ್ಟ ಕೀಟ, ರೋಗಗಳು ಕಾಡುತ್ತವೆ. ಹಾಗಾಗಿ ರೈತರು ಬೆಳೆ ವೈವಿಧ್ಯ ಕಾಪಾಡಿಕೊಳ್ಳಬೇಕು, ಬೆಳೆ ಪರಿವರ್ತನೆಯಿಂದ ಜಮೀನಿನ ಫಲವತ್ತತೆಯೂ ಹೆಚ್ಚುತ್ತದೆ ಎನ್ನಲಾಗುತ್ತಿದೆ. ಆದರೆ ಈ ಕಾರಣಕ್ಕೆ ರೈತರು ಕಡಲೆಗೆ ಪರ್ಯಾಯವಾಗಿ ತೊಗರಿ ಬೆಳೆದಿಲ್ಲ. ಬದಲಾಗಿ ಕಳೆದ ವರ್ಷ ಮಾರುಕಟ್ಟೆಯಲ್ಲಿ ತೊಗರಿಗೆ ಅತಿ ಹೆಚ್ಚು (ಕ್ವಿಂಟಲ್ಗೆ ₹ 10-12 ಸಾವಿರ) ಬೆಲೆ ಸಿಕಿತ್ತು. ಕಡಲೆ ಕೇವಲ ₹ 4-5 ಸಾವಿರಕ್ಕೆ ಮಾರಾಟವಾಗಿತ್ತು. ಈ ಕಾರಣಕ್ಕೆ ರೈತರು ಬೆಳೆ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು. ಅಲ್ಲದೆ ಎರೆ ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಯ ಮಧ್ಯೆ ಬಹಳಷ್ಟು ರೈತರು ಮೆಕ್ಕೆಜೋಳ, ಹೆಸರು ಬೆಳೆಯ ಉತ್ತಮ ಫಸಲನ್ನೂ ಪಡೆದಿದ್ದಾರೆ.

ಕ್ರಿಮಿನಾಶಕ ಅನಗತ್ಯ ಸಿಂಪಡಣೆ

ತೊಗರಿ ಬೆಳೆಯಲ್ಲಿ ಸದ್ಯ ರೋಗ ಕೀಟ ಬಾಧೆ ಇಲ್ಲ ಅನಗತ್ಯವಾಗಿದ್ದರೂ ರೈತರು ಕೀಟನಾಶಕ ಸಿಂಪಡಿಸುತ್ತಿರುವುದು ಕಂಡುಬರುತ್ತಿದೆ. ಅತಿಯಾದ ರಾಸಾಯನಿಕಗಳ ಬಳಕೆಯಿಂದ ಹೂವುಗಳು ಉದುರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಹಂಚಿನಾಳದ ಅನುಭವಿ ರೈತ ರಾಮನಗೌಡ ಪಾಟೀಲ. ‘ಬಹಳಷ್ಟು ಕಾಯಿಗಳು ಕಾಳುಕಟ್ಟಿವೆ ಪೂರಕ ವಾತಾವರಣದಿಂದಾಗಿ ತೊಗರಿ ಗಿಡಗಳು ಪುನಃ ಚಿಗುರಿ ಹೂವುಗಳ ಸಂಖ್ಯೆಯೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಪೋಷಕಾಂಶ ಕೊರತೆ ನಿವಾರಣೆಗೆ ಬೆಳೆಗೆ ಶಿಫಾರಸು ಮಾಡಿದ ಲಘುಪೋಷಕಾಂಶಳನ್ನಷ್ಟೇ ಸಿಂಪಡಿಸಿದರೆ ಸಾಕು. ಕೀಟಗಳ ಬಾಧೆ ಕಂಡುಬಂದರೆ ಮಾತ್ರ ಕೀಟನಾಶಕ ಸಿಂಪಡಿಸಬೇಕು’ ಎನ್ನುತ್ತಾರೆ ಕುಷ್ಟಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಜಮೀರಲಿ ಬೆಟಗೇರಿ.

ಹಿಂಗಾರು ಬಿತ್ತನೆ; ಈ ವಾರ ಏರಿಕೆ ನಿರೀಕ್ಷೆ

ಕೊಪ್ಪಳ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಇತ್ತೀಚೆಗಿನ ಮಾಹಿತಿ ಪ್ರಕಾರ 44090 ಹೆಕ್ಟೇರ್ನಷ್ಟು ಬಿತ್ತನೆಯಾಗಿದೆ. ಕಳೆದ ವಾರದಲ್ಲಿ ಇದರ ಪ್ರಮಾಣ ಹೆಚ್ಚಾಗಿದ್ದು ಈ ವಾರ ಬಿತ್ತನೆ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಏಕದಳ ಧಾನ್ಯಗಳಾದ ಜೋಳ ಮೆಕ್ಕೆಜೋಳ ಸಜ್ಜೆ ಗೋಧಿ ದ್ವಿದಳ ಧಾನ್ಯಗಳಾದ ಕಡಲೆ ಹುರಳಿ ಅಲಸಂದಿ ಎಣ್ಣೆಕಾಳುಗಳಾದ ಸೂರ್ಯಕಾಂತಿ ಕುಸುಬೆ ಅಗಸೆ ಶೇಂಗಾ ಮತ್ತು ಅಲ್ಪ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಹವಾಮಾನದ ವೈಪರೀತ್ಯ ಹಾಗೂ ಮಳೆಯ ಚಿನ್ನಾಟದ ನಡುವೆ ಕುಷ್ಟಗಿ ತಾಲ್ಲೂಕಿನಲ್ಲಿ ಪರ್ಯಾಯ ಬೆಳೆಯತ್ತ ರೈತರು ಗಮನ ಹರಿಸಿದ್ದರೆ ಕುಕನೂರು ಹಾಗೂ ಅಳವಂಡಿ ಭಾಗದಲ್ಲಿ ಸಾಂಪ್ರದಾಯಿಕತೆಯ ಮೊರೆ ಹೋಗಿರುವ ಚಿತ್ರಣ ಅಲ್ಲಲ್ಲಿ ಕಂಡುಬರುತ್ತಿದೆ.

ಎರೆ ಜಮೀನಿನಲ್ಲಿ ಈ ಬಾರಿ ತೊಗರಿ ಬೆಳೆಗೆ ರೈತರು ಹೆಚ್ಚಿನ ಆದ್ಯತೆ ನೀಡಿದ್ದು ಕಡಲೆ ಬೆಳೆ ಪ್ರದೇಶ ಗಣನೀಯವಾಗಿ ಕುಸಿದಿದೆ
-ಅಜಮೀರಲಿ ಬೆಟಗೇರಿ ಸಹಾಯಕ ಕೃಷಿ ನಿರ್ದೇಶಕ ಕುಷ್ಟಗಿ

ಕವಿದ ಮೋಡ ಸರಿದು ಪ್ರಖರ ಬಿಸಿಲು ಮತ್ತು ಚಳಿ ಅವರಿಸಿದರೆ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಕಟ್ಟುತ್ತದೆ
-ಮಲ್ಲಪ್ಪ ಮುದಗಲ್ ರೈತ.

ಕಡಲೆ ಜೋಳದ ಬೆಳೆಗಳು ಈ ಬಾರಿ ಅತ್ಯುತ್ತಮವಾಗಿವೆ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ
ಬಸನಗೌಡ ಮೇಟಿ ಟೆಂಗುಂಟಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.