ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸುಪ್ರಿಯಾ 14ನೇ ವಯಸ್ಸಿಗೆ ಯೋಗದಲ್ಲಿ ಗಮನೀಯ ಸಾಧನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಜೂನ್ 1ರಂದು ನಡೆದ ರಾಜ್ಯ ಮಟ್ಟದ ‘ಯೋಗ ಒಲಂಪಿಯಾಡ್’ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಮೈಸೂರಿನ ಪ್ರಸಿದ್ಧ ವಿವೇಕಾನಂದ ಅಂತರರಾಷ್ಟ್ರೀಯ ಯೋಗಶಾಲೆ ಏರ್ಪಡಿಸುವ ರಾಜ್ಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಎರಡು ಬಾರಿ ಪಾಲ್ಗೊಂಡು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರು ವಿಭಾಗ ಮಟ್ಟದ ವೈಯಕ್ತಿಕ ಯೋಗ ಸ್ಪರ್ಧೆಯಲ್ಲಿ ಸತತವಾಗಿ ಎರಡು ವರ್ಷ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ 2024ನೇ ಸಾಲಿನ ದಸರಾ ಯೋಗ ಸ್ಪರ್ಧೆಯಲ್ಲಿ ಕೂಡ ಇವರಿಗೆ ಪ್ರಥಮ ಸ್ಥಾನ ಲಭಿಸಿದೆ.

50ಕ್ಕೂ ಹೆಚ್ಚು ಆಸನ:

ಸುಪ್ರಿಯಾ ಯೋಗದಲ್ಲಿ 50ಕ್ಕೂ ಹೆಚ್ಚು ಆಸನಗಳನ್ನು ಅಭ್ಯಾಸ ಮಾಡಿದ್ದು ಲೀಲಾಜಾಲವಾಗಿ ಪ್ರದರ್ಶನ ನೀಡಬಲ್ಲರು. ಶಿರಸಾಸನ, ಸರ್ವಾಂಗಾಸನ, ಧನುರಾಸನ, ಉಷ್ಟ್ರಾಸನ, ಲಘು ವಜ್ರಾಸನ, ಹನುಮಾಸನ, ಪಶ್ಚಿಮೋತ್ಥಾಸನ ಸೇರಿದಂತೆ ಇತರ ಕಠಿಣ ಆಸನಗಳನ್ನೂ ಕೂಡ ಸುಪ್ರಿಯಾ ನಿರಾಯಾಸವಾಗಿ ಪ್ರದರ್ಶಿಸುವ ಕೌಶಲ ಗಳಿಸಿದ್ದಾರೆ.

ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ನಿಂಗರಾಜು ಅವರ ಪುತ್ರಿ ಸುಪ್ರಿಯಾ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ಕೆ.ಶೆಟ್ಟಹಳ್ಳಿಯ ವಿವೇಕಾನಂದ ಯೋಗ ಕಿಶೋರ ಕೇಂದ್ರದಲ್ಲಿ ತಮ್ಮ 6ನೇ ವಯಸ್ಸಿನಿಂದ ಇವರು ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ. ಯೋಗ ತರಬೇತುದಾರ ಅಪ್ಪಾಜಿ ಮಾರ್ಗದರ್ಶನಲ್ಲಿ ಯೋಗವನ್ನು ಕಲಿಯುತ್ತಿದ್ದು, ಪತಂಜಲಿ ಮಹರ್ಷಿ ಹೇಳಿರುವ ಅಷ್ಟಾಂಗ ಯೋಗ ಪ್ರಕಾರಗಳಲ್ಲಿ ಪೂರ್ಣ ಸಿದ್ಧಿ ಪಡೆಯುವ ಬಯಕೆ ಸುಪ್ರಿಯಾ ಅವರದ್ದು.

‘ಯೋಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸೆ ನನ್ನದು. ಯೋಗ ತರಬೇತುದಾರ ಅಪ್ಪಾಜಿ ಮತ್ತು ನನ್ನ ತಂದೆ ನಿಂಗರಾಜು ಅವರ ಪ್ರೋತ್ಸಾಹದಿಂದ ಇಷ್ಟು ಸಾಧನೆ ಮಾಡಿದ್ದು, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿಷಯದಲ್ಲಿ ಪದವಿ ಪಡೆದು ವೈದ್ಯೆಯಾಗಬೇಕು ಎಂಬ ಗುರಿ ಹೊಂದಿದ್ದೇನೆ’ ಎಂದು ಸುಪ್ರಿಯಾ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.