ಮೈಸೂರು: ವಿದ್ವಾನ್ ಸಂದೀಪ್ ನಾರಾಯಣ್ ಅವರ ಕರ್ನಾಟಕ ಸಂಗೀತ ಗಾಯನದ ಭಾವ ಗಂಗೋತ್ರಿಯಲ್ಲಿ ಭಾನುವಾರ ಸಹೃದಯರು ಮಿಂದರು. ಅದರೊಂದಿಗೆ ‘ಮೈಸೂರು ಸಾಹಿತ್ಯ ಸುಗಂಧ–2024’ಕ್ಕೆ ವೈಭವದ ತೆರೆಬಿತ್ತು.

ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ಸಂಸ್ಕೃತಿ ಸಚಿವಾಲಯವು ಆಯೋಜಿಸಿದ್ದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತದ ದಾಸ ಪರಂಪರೆಯ ಸಂಗೀತೋತ್ಸವದ ಕಡೇ ದಿನದ ಕೊನೆಯ ಕಛೇರಿಯಲ್ಲಿ ಸಂದೀಪ್ ಭಾವಲೋಕ ಸೃಷ್ಟಿಸಿದರು.

‘ಕಾಮವರ್ಧಿನಿ’ ರಾಗದ ಕನಕದಾಸರ ಕೀರ್ತನೆ ‘ರಾಮಾನುಜರೇ ನಮೋ ನಮೋ’ ಮೂಲಕ ಕಛೇರಿ ಆರಂಭಿಸಿದ ಅವರು ಎಲ್ಲರನ್ನು ಸೆಳೆದರು. ನಂತರ ‘ಪೂರ್ವಿ ಕಲ್ಯಾಣಿ’ ರಾಗದ ಪುರಂದರದಾಸರ ‘ಹಿಡಕೋ ಬಿಡಬೇಡ ರಂಗನ ಪಾದ’ ಕೀರ್ತನೆ ಹಾಡಿದರು. ಇದೇ ರಾಗದಲ್ಲಿ ಸುದೀರ್ಘ ರಾಗಾಲಾಪನೆ ಮಾಡುವ ಮೂಲಕ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿದರು.

ಕೀರವಾಣಿ ರಾಗದ ಜಗನ್ನಾಥದಾಸರ ಕೀರ್ತನೆ ‘ನಿನ್ನೆ ನಂಬಿದೆ ರಾಘವೇಂದ್ರ.. ನೀ ಎನ್ನ ಪಾಲಿಸೋ’ ಹಾಡಿ, ತನಿ ಆವರ್ತನಕ್ಕೆ ಅವಕಾಶ ನೀಡಿದರು. ಪುರಂದರದಾಸರ ಪದ ‘ನಾಯಿ ಬರುತಿದೆ ನೋಡೆ’ ಪ್ರಸ್ತುತಪಡಿಸಿ ಎಲ್ಲರನ್ನೂ ತಲೆದೂಗಿಸಿದರು.

ಇದಕ್ಕೂ ಮೊದಲು ನಡೆದ ಸಮಾರೋಪದಲ್ಲಿ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾದರಿ ಮೈಸೂರು ನಿರ್ಮಿಸಿದ್ದರು. ನಾಡಿನ ಪರಂಪರೆ, ಸಂಸ್ಕೃತಿಯ ತವರೂರಾಗಿಸಿದ್ದರು. ಇಂಥ ಸ್ವಚ್ಛ, ಸುಂದರ ಮನಸ್ಸುಗಳಿರುವಲ್ಲಿ ಕಲೆ ಅರಳುತ್ತದೆ’ ಎಂದರು.

‘ತಮಿಳುನಾಡಿನ ತಿರೂವಾರೂರಿನಲ್ಲಿ ನಡೆಯುತ್ತಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಉತ್ಸವದ ಮಾದರಿಯಲ್ಲಿ ದಕ್ಷಿಣ ಭಾರತ ಎಲ್ಲ ರಾಜ್ಯಗಳಲ್ಲೂ ಆಯೋಜಿಸಲಾಗುತ್ತಿದೆ. ಆಂಧ್ರದಲ್ಲಿ ಕೃಷ್ಣವೇಣಿ ಉತ್ಸವ ನಡೆಸಲಾಗಿತ್ತು. ಈ ಬಾರಿ ಮೈಸೂರಿನಲ್ಲಿ ನಡೆದಿದೆ. ಮುಂದಿನ ವರ್ಷ ಕೇರಳದಲ್ಲಿ ಆಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಮೈಸೂರಿನ ದಾಸ ಪರಂಪರೆಯ ಸಂಗೀತೋತ್ಸವದಲ್ಲಿ ಪಾಲ್ಗೊಂಡು ಹೃದಯ ತುಂಬಿ ಬಂದಿದೆ. ಕನ್ನಡಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವೆಂದು ತಿಳಿಯಿತು. ಮುಂದಿನ ವರ್ಷವೂ ಕರ್ನಾಟಕ ರಾಜ್ಯೋತ್ಸವದ ವೇಳೆಯೇ ಸಂಗೀತ ಸುಗಂಧ ನಡೆಯಲಿದೆ’ ಎಂದರು.

ಸಚಿವಾಲಯದ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಡಿ.ವೆಂಕಟೇಶನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯೆ ನಾಗಮಣಿ ಶ್ರೀನಾಥ್ ಹಾಜರಿದ್ದರು.

Highlights - ಮೂರು ದಿನಗಳ ಸಂಗೀತೋತ್ಸವ ದಾಸ ಪರಂಪರೆ ಅನಾವರಣ ಸಂಗೀತ ಕಲಾವಿದರ ಸಂಗಮ

‘ಪ್ರತಿ ವರ್ಷವೂ ಉತ್ಸವ’

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕಿ ಮುಗ್ದಾ ಸಿನ್ಹಾ ಮಾತನಾಡಿ ‘ಪ್ರತಿವರ್ಷವೂ ಮೈಸೂರಿನಲ್ಲಿ ಸಂಗೀತೋತ್ಸವ ಆಯೋಜಿಸಲಾಗುವುದು. ಹಿಂದೂಸ್ಥಾನಿ ಹಾಗೂ ಕರ್ನಾಟಿಕ್ ಸಂಗೀತ ಸಮನ್ವಯ ಪ್ರಯೋಗ ನಡೆಸುವಂಥ ವಾತಾವರಣವನ್ನೂ ನಿರ್ಮಿಸಲಾಗುವುದು’ ಎಂದರು. ‘ಹಾಡು ಸಂಗೀತದ ಮೂಲಕ ಜೀವಂತವಾಗಿರುವ 5 ಸಾವಿರ ವರ್ಷಗಳ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದರು. ‘ಗುರು– ಶಿಷ್ಯ ಪರಂಪರೆ ಮೂಲಕ ಜ್ಞಾನವು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತದೆ. ಭಾರತ ವೈವಿಧ್ಯಮಯ ಪರಂಪರೆಗಳು ಈ ಮಾದರಿಯಲ್ಲಿಯೇ ಉಳಿದಿವೆ. ಸಾಹಿತ್ಯ– ಸಂಗೀತದ ಮೂಲಕವೇ ದೇಶದ ನಾಗರಿಕತೆ ಹಾಗೂ ಇತಿಹಾಸವನ್ನು ಅರಿಯಲು ಸಾಧ್ಯ’ ಎಂದು ಹೇಳಿದರು. ‘ಸಂಗೀತ–ಕಲೆಯೆಂಬುದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ವೈಯಕ್ತಿಕ ನೆಲೆಗಟ್ಟಿನಲ್ಲಿದೆ. ಭಾರತದಲ್ಲಿ ಸಂಗೀತ– ನಾಟಕ ಯಾವುದೇ ಆಗಲಿ ಸಾಮೂಹಿಕ ಸೃಷ್ಟಿಯಾಗಿರುತ್ತದೆ. ಸತ್ಯಂ– ಶಿವಂ– ಸುಂದರಂ ಎಂಬುದು ಭಾರತೀಯರು ಕಲಾಭಿವ್ಯಕ್ತಿಗೆ ನೀಡಿರುವ ಮನ್ನಣೆ. ಸತ್ಯವೇ ಸೌಂದರ್ಯವಾಗಿದೆ. ಪ್ರತಿಭೆ ಕಲೆಯಲ್ಲಿ ಸತ್ಯ ಹಾಗೂ ಸೌಂದರ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.