ವೈವಿಧ್ಯಮಯವಾಗಿ ಆಯೋಜಿಸಲು ತೀರ್ಮಾನ ಪ್ರತಿ ವರ್ಷದಂತೆ ಈ ಬಾರಿಯೂ 90 ದಿನ ಆಯೋಜನೆ ಪ್ರಗತಿಯಲ್ಲಿ ಟೆಂಡರ್ ಪ್ರಕ್ರಿಯೆ
ಪ್ರವಾಸಿಗರಿಂದ ಪ್ರವೇಶ ದ್ವಾರದಲ್ಲೇ ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಬಟ್ಟೆ ಬ್ಯಾಗ್ ಉಚಿತವಾಗಿ ಕೊಡಲಾಗುವುದು. ಇದಕ್ಕಾಗಿ ಮಾರ್ಷಲ್‌ಗಳು ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು
ಅಯೂಬ್ ಖಾನ್ ಅಧ್ಯಕ್ಷ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ
‘ಪ್ರವೇಶ ಶುಲ್ಕ ₹5 ಹೆಚ್ಚಳ’
‘ದಸರಾ ಉದ್ಘಾಟನೆ ದಿನದಂದೇ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಲಾಗುತ್ತದೆ. ಎಲ್ಲ ಮಳಿಗೆಗಳೂ ಭರ್ತಿ ಆಗುವಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕವೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಿಸಲಾಗಿದೆ’ ಎಂದು ಅಯೂಬ್‌ಖಾನ್ ಪ್ರತಿಕ್ರಿಯಿಸಿದರು. ‘ಬೆಲೆ ಏರಿಕೆ ಕಾರಣದಿಂದಾಗಿ ಈ ಬಾರಿ ಪ್ರವೇಶ ಶುಲ್ಕವನ್ನು ವಯಸ್ಕರಿಗೆ ₹5 ಜಾಸ್ತಿ ಮಾಡುವ ಉದ್ದೇಶವಿದೆ. ಮಕ್ಕಳ ಟಿಕೆಟ್ ದರದಲ್ಲಿ ವ್ಯತ್ಯಾಸವೇನಿರುವುದಿಲ್ಲ’ ಎಂದರು. ಹೋದ ವರ್ಷ ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ ಇತ್ತು.