ಮೈಸೂರು: ಅಮೆರಿಕಾದಲ್ಲಿ ನಿಧನರಾದ ಯೋಗಗುರು ಶರತ್ ಜೋಯಿಸ್ ಅವರ ಅಂತ್ಯಸಂಸ್ಕಾರವು ಸೋಮವಾರ ಮಧ್ಯಾಹ್ನ ಗೋಕುಲಂನ ಸ್ಮಶಾನದಲ್ಲಿ ನಡೆಯಿತು.

ನ.11ರಂದು ಶರತ್ ಅವರು ಹೃದಯಾಘಾತದಿಂದ ವರ್ಜೀನಿಯದಲ್ಲಿ ನಿಧನರಾಗಿದ್ದರು. ಅವರ ಪತ್ನಿ ಶ್ರುತಿ ಜೋಯಿಸ್ ಹಾಗೂ ಮಗ ಶಾಂಭವ್ ಜೋಯಿಸ್ ಅಲ್ಲಿಗೆ ತೆರಳಿ ಭಾನುವಾರ ರಾತ್ರಿ ಮೃತದೇಹವನ್ನು ಬೆಂಗಳೂರಿಗೆ ತಂದರು. ಸೋಮವಾರ ಬೆಳಿಗ್ಗೆಯಿಂದ ವಿವಿ ಮೊಹಲ್ಲಾದಲ್ಲಿರುವ ಶರತ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮನಾಥ ಸ್ವಾಮೀಜಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.