‘ಪೂರೈಕೆಯಲ್ಲಿ ವ್ಯತ್ಯಯವಾಗದು’
340.5 ಎಂಎಲ್‍ಡಿ ಸಾಮರ್ಥ್ಯವಿರುವ ಸಿಂಧನೂರು ನಗರದ ದೊಡ್ಡ ಕೆರೆಯಲ್ಲಿ 75 ಎಂಎಲ್‍ಡಿ 77.18 ಎಂಎಲ್‍ಡಿ ಸಾಮರ್ಥ್ಯವಿರುವ ಸಣ್ಣ ಕೆರೆಯಲ್ಲಿ 15 ಎಂಎಲ್‍ಡಿ ಹಾಗೂ 2551.48 ಎಂಎಲ್‍ಡಿ ಸಾಮರ್ಥ್ಯವಿರುವ ತುರ್ವಿಹಾಳ ಬಳಿಯ ಕೆರೆಯಲ್ಲಿ 590 ಎಂಎಲ್‍ಡಿ ನೀರು ಸಂಗ್ರಹವಿದೆ. ಒಟ್ಟು 680 ಎಂಎಲ್‍ಡಿ ನೀರು ಸಂಗ್ರಹವಿದ್ದು ಇದರಲ್ಲಿ ಶೇ 20ರಷ್ಟು ಅಂದರೆ 136 ಎಂಎಲ್‍ಡಿ ನೀರು ಆವಿಯಾಗಲಿದ್ದು 544 ಎಂಎಲ್‍ಡಿ ನೀರು ಲಭ್ಯವಾಗಲಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.