ರಾಮನಗರ: ರಾಜ್ಯದಾದ್ಯಂತ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡುದಾರರ ಸ್ಥಾನಮಾನ ಆಧರಿಸಿ ಅವರ ಕಾರ್ಡುಗಳನ್ನು ಪರಿಷ್ಕರಿಸುವ ಕಾರ್ಯಕ್ಕೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಚಾಲನೆ ಕೊಟ್ಟಿದೆ. ಕಾರ್ಡುದಾರರು ಬಿಪಿಎಲ್ ಮಾನದಂಡಗಳನ್ನು ಮೀರಿದ್ದರೆ ಅವರ ಕಾರ್ಡನ್ನು ಎಪಿಎಲ್ (ಬಡತನ ರೇಖೆಗಿಂತ ಮೇಲಿರುವವರು) ಆಗಿ ಬದಲಾಯಿಸಲಾಗುತ್ತಿದೆ.

ಜಿಲ್ಲೆಯಲ್ಲೂ ಪರಿಷ್ಕರಣೆ ಕಾರ್ಯ ಚುರುಕುಗೊಂಡಿದೆ. ಆದಾಯ ತೆರಿಗೆ ಪಾವತಿಸುತ್ತಿದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದ 1,571 ಮಂದಿಯ ಕಾರ್ಡುಗಳನ್ನು ಎಪಿಎಲ್ ಆಗಿ ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ, ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ನಿಗದಿಪಡಿಸಿರುವ ಆದಾಯದ ಮಿತಿ ₹1.20 ಲಕ್ಷ ಮೀರಿ ಆದಾಯ ಹೊಂದಿರುವ 74 ಮಂದಿಯ ಕಾರ್ಡುಗಳನ್ನು ಸಹ ಬದಲಾಯಿಸಲಾಗಿದೆ.

ತಂತ್ರಜ್ಞಾನದ ಆಸರೆ: ‘ಪಡಿತರ ಕಾರ್ಡುಗಳ ಪರಿಷ್ಕರಣೆಯು ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ನಡೆಯುತ್ತಿದೆ. ಪಡಿತರ ಚೀಟಿಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿರುವುದು ಇದಕ್ಕೆ ಸಹಕಾರಿಯಾಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ರಮ್ಯ ಸಿ.ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಬ್ಬರ ಬ್ಯಾಂಕ್ ಖಾತೆಯೂ ಪ್ಯಾನ್ ಸಂಖ್ಯೆ ಜೊತೆಗೆ ಆಧಾರ್ ಲಿಂಕ್ ಆಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಡುದಾರರ ಬಡತನ ರೇಖೆ ಮೀರಿದ ಆರ್ಥಿಕ ಸ್ಥಿತಿ, ಆದಾಯ ತೆರಿಗೆ ಪಾವತಿಯು ಒಂದಲ್ಲ ಒಂದು ಮೂಲದಿಂದ ಸರ್ಕಾರಕ್ಕೆ ಈಗ ಗೊತ್ತಾಗುತ್ತದೆ. ಹಾಗಾಗಿ, ಅಂತಹವರ ಹೆಸರನನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟು ಎಪಿಎಲ್ಗೆ ಸೇರಿಸಲಾಗುತ್ತಿದೆ’ ಎಂದು ಹೇಳಿದರು.

ದತ್ತಾಂಶ ಲಭ್ಯ: ‘ಯಾವುದೇ ವ್ಯಕ್ತಿ ಈಗ ಬ್ಯಾಂಕ್ನಲ್ಲಿ ಸಾಲ ಪಡೆಯಬೇಕಾದರೆ ಆತನ ವಾರ್ಷಿಕ ಆದಾಯ, ಬ್ಯಾಂಕ್ ವಹಿವಾಟಿನ ವಿವರವನ್ನು ಬ್ಯಾಂಕ್ನವರು ಕೇಳುತ್ತಾರೆ. ಹಾಗಾಗಿ, ಆ ವ್ಯಕ್ತಿ ಅಲ್ಲಿಗೆ ಸಲ್ಲಿಸಿದ ತನ್ನ ಆದಾಯದ ವಿವರದ ದತ್ತಾಂಶವು ಸ್ಕ್ಯಾನ್ ಆಗುತ್ತದೆ. ಆದರೆ, ಕಾರ್ಡುದಾರರಿಗೆ ಇದ್ಯಾವುದು ಗೊತ್ತಿರುವುದಿಲ್ಲ. ಹಾಗಾಗಿ, ತಮ್ಮನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎನ್ನುತ್ತಾರೆ. ವಾಸ್ತವವಾಗಿ ಕಾರ್ಡುದಾರರ ಆರ್ಥಿಕ ಸ್ಥಿತಿ ಆಧರಿಸಿಯೇ ಈ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕಾರ್ಡು ಪರಿಷ್ಕರಣೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ವಾರ್ಷಿಕ ₹1.20 ಲಕ್ಷ ಮೀರಿ ಆದಾಯ ಗಳಿಸುವವರ ಕಾರ್ಡುಗಳು ಬಿಪಿಎಲ್ನಿಂದ ಎಪಿಎಲ್ ಆಗಿ ಬದಲಾಗಲಿವೆ. ಸರ್ಕಾರದ ಸೌಲಭ್ಯ ಅರ್ಹರನ್ನು ಮಾತ್ರ ತಲುಪಬೇಕು ಎಂಬುದು ಇದರ ಉದ್ದೇಶವಾಗಿದೆ’ ಎಂದರು.

ಅಂಕಿಅಂಶ...

9,3586 ತಿಂಗಳಿಂದ ಪಡಿತರ ಪಡೆಯದವರು

91ಎಚ್ಆರ್ಎಂಎಸ್ನಿಂದ ಬದಲಾವಣೆ

1,571ಆದಾಯ ತೆರಿಗೆ ಪಾವತಿದಾರರು

74ವಾರ್ಷಿಕ ಆದಾಯ

₹1.20 ಲಕ್ಷಕ್ಕಿಂತ ಅಧಿಕ ಇರುವವರು

ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡುಗಳನ್ನು ಕಾರ್ಡುದಾರರ ಬ್ಯಾಂಕ್ ವಹಿವಾಟು ಸೇರಿದಂತೆ ಇತರ ಮಾಹಿತಿಗಳನ್ನು ಆಧರಿಸಿ ಪರಿಷ್ಕರಣೆ ಮಾಡಲಾಗುತ್ತಿದೆ
ರಮ್ಯ ಸಿ.ಆರ್. ಉಪ ನಿರ್ದೇಶಕಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ

ಅಮಾನತಿನಲ್ಲಿ 9358 ಕಾರ್ಡುಗಳು

‘ಜಿಲ್ಲೆಯಲ್ಲಿ 9358 ಕಾರ್ಡುದಾರರು ಕನಿಷ್ಠ ಆರು ತಿಂಗಳಿಂದ ಪಡಿತರವನ್ನೇ ಪಡೆದಿಲ್ಲ. ಅಂತಹ ಕಾರ್ಡುಗಳನ್ನು ಗುರುತಿಸಿ ಅಮಾನತಿನಲ್ಲಿಡಲಾಗಿದೆ. ಕಾರ್ಡುದಾರರು ಮೃತಪಟ್ಟಿದ್ದರೆ ಕೆಲಸಕ್ಕಾಗಿ ಊರು ಬಿಟ್ಟಿದ್ದರೆ ಅನಾರೋಗ್ಯಪೀಡಿತರಾಗಿರುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಪಡಿತರ ಪಡೆಯಲು ಸಾಧ್ಯವಾಗದಿರಬಹುದು. ಹಾಗಾಗಿ ಅವರ ಕಾರ್ಡುಗಳನ್ನು ರದ್ದುಪಡಿಸದೆ ಅಮಾನತು ಮಾಡಲಾಗಿದೆ. ಕಾರ್ಡುದಾರರು ಮುಂದೊಂದು ದಿನ ಸಂಬಂಧಪಟ್ಟ ಕಚೇರಿಗೆ ಬಂದು ದಾಖಲೆ ಸಮೇತ ಸೂಕ್ತ ಕಾರಣ ನೀಡಿದರೆ ಅಂತಹ ಕಾರ್ಡನ್ನು ಮತ್ತೆ ಸಕ್ರಿಯಗೊಳಿಸಲಾಗುವುದು’ ಎಂದು ರಮ್ಯ ಸಿ.ಆರ್. ಹೇಳಿದರು. ‘ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರಿಂದ ಧೀರ್ಘಾವಧಿಯವರೆಗೆ ಪಡಿತರ ಬಿಡುಗಡೆಯಾಗಿರಲಿಲ್ಲ. ಅವರು ನ್ಯಾಯಬೆಲೆ ಅಂಗಡಿಗೆ ಹೋದಾಗ ಅವರಿಗೆ ಪಡಿತರ ನಿರಾಕರಿಸಲಾಗಿತ್ತು. ಆಗ ಅವರು ಕಚೇರಿಗೆ ಬಂದು ವಿಷಯ ತಿಳಿಸಿ ದಾಖಲೆ ತೋರಿಸಿದಾಗ ಅವರ ಕಾರ್ಡ್ ಅನ್ನು ಮತ್ತೆ ಸಕ್ರಿಯಗೊಳಿಸಲಾಯಿತು. ಸದ್ಯ ಅವರು ಪಡಿತರ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.