ಪಾವಗಡ: ತಾಲ್ಲೂಕಿನ ಹೊಸಹಳ್ಳಿ ತಾಂಡಾದ ಹಲವರಲ್ಲಿ ಡೆಂಗಿ ಪತ್ತೆಯಾಗಿದೆ.

ಡೆಂಗಿ ಲಕ್ಷಣ ಇರುವವರ ರಕ್ತ ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿದೆ. ಮತ್ತೆ ಕೆಲವರ ರಕ್ತದ ಮಾದರಿಗಳನ್ನು ತುಮಕೂರಿಗೆ ಕಳುಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ಇಲ್ಲ ಎಂದು ವರದಿ ಬಂದಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಅದೇ ವ್ಯಕ್ತಿಗಳಲ್ಲಿ ಡೆಂಗಿ ಇದೆ ಎಂದು ವರದಿ ಬಂದಿದೆ. ಹೀಗಾಗಿ ಮತ್ತೆ ತುಮಕೂರಿಗೆ ರಕ್ತದ ಮಾದರಿ ಕಳುಹಿಸಲಾಗಿದೆ.

ಈವರೆಗೆ ಎಷ್ಟು ಮಂದಿಗೆ ಡೆಂಗಿ ಇದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ.

ತಾಲ್ಲೂಕು ವೈದ್ಯಾಧಿಕಾರಿ ಕಿರಣ್ ಪ್ರತಿಕ್ರಿಯಿಸಿ, ಗ್ರಾಮದ ಹೆಚ್ಚಿನ ಜನರಲ್ಲಿ ಜ್ವರ ಕಾಣಿಸಿದೆ. ಒಂದು ವಾರದವರೆಗೆ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.