ತುಮಕೂರು: ‘ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ ಈ ಸಮಾಜಕ್ಕೆ ಮಹಾನ್ ದ್ರೋಹ ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ಸಾಧನೆ ಹೊತ್ತುಕೊಂಡಿದೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೂರ್ಣ ವಿಚಾರ ಹೊರ ಬಂದರೆ ಎಷ್ಟು ಕುಟುಂಬಗಳು ಹಾಳಾಗುತ್ತವೆ ಎಂಬುದು ಗೊತ್ತಿದೆಯೇ? ಗೌಡರು ಪದೇ ಪದೇ ನಿಖಿಲ್ ಹೆಸರು ಹೇಳುತ್ತಾರೆ. ಪ್ರಜ್ವಲ್ ಅಂಥ ಯಾಕೆ ಹೇಳಬಾರದು. ಪ್ರಜ್ವಲ್ ಮೊಮ್ಮಗ ಅಲ್ಲವೇ? ಇಂತಹ ಅನಾಚಾರ ಮಾಡಿದವರಿಗೆಲ್ಲ ಪ್ರಾಯಶ್ಚಿತ್ತ ಆಗಬೇಕು’ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು ಪ್ರಯತ್ನಿಸುವುದು ತಪ್ಪಲ್ಲ. ಆದರೆ, ದೇವೇಗೌಡರು ಬಂದು ‘ರಾಜ್ಯ ಸರ್ಕಾರವನ್ನು ತೆಗೆದು ಬಿಡ್ತೀನಿ’ ಎಂದು ಹಲ್ಲು ಕಡೀತಾರೆ. ಕಾಂಗ್ರೆಸ್ನ 136 ಶಾಸಕರು ಗೌಡರ ಬಾಂಡೆಂಡ್ ನೌಕರರೆ? ಶಾಸಕರಿಗೆ ಸ್ವಶಕ್ತಿ, ಸ್ವಬುದ್ಧಿ ಇರುವುದಿಲ್ಲವೆ? ಈ ರೀತಿ ಹೇಳುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಹಿರಿತನಕ್ಕೆ ಗೌರವ ಬರುವ ರೀತಿಯಲ್ಲಿ ಮಾತನಾಡಬೇಕು ಎಂದು ಕುಟುಕಿದರು.

‘ದೇವೇಗೌಡರಿಗೆ ವಯಸ್ಸಾಗಿದ್ದು, ಆರೋಗ್ಯ ಸಮಸ್ಯೆ ಇದೆ. ಆದರೂ ಕರೆತಂದು ಬೀದಿ–ಬೀದಿ ಅಲೆಸಿ ಹಿಂಸೆ ಕೊಡುತ್ತಿದ್ದಾರೆ. ನಾನು ಅವರ ಮಗನಾಗಿದ್ದರೆ ಈ ರೀತಿ ಹೊರಗಡೆ ಬಂದು ತೊಂದರೆ ತೆಗೆದುಕೊಳ್ಳಬೇಡಿ, ಮನೆಯಲ್ಲಿರಿ. ನಾವು ರಾಜಕಾರಣ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದೆ. ಇದನ್ನು ಅವರ ಮಕ್ಕಳು, ಮೊಮ್ಮಕ್ಕಳು ಮಾಡಬೇಕಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.