ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮೇಲಿನ ವಳಗೇರಹಳ್ಳಿ ಗ್ರಾಮದ ನಿವಾಸಿ ಬಸವರಾಜು ಅವರ ಪತ್ನಿ ಶಶಿಕಲಾ(37) ಆಕೆಯ ಮೂರುವರೆ ವರ್ಷದ ಮಗು ಗೋಕುಲ್ನೊಂದಿಗೆ ತುರುವೇಕೆರೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಶಿಕಲಾ 15 ವರ್ಷದ ಹಿಂದೆ ಬಸವರಾಜು ಎನ್ನುವವರನ್ನು ಮದುವೆಯಾಗಿದ್ದರು. ದಂಪತಿಗೆ ಮೂರುವರೆ ವರ್ಷದ ಗಂಡು ಮಗುವಿತ್ತು.

ಬಸವರಾಜು ಕುಡಿದು ಬಂದು ರಾತ್ರಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಎರಡೂ ಕುಟುಂಬದವರು ರಾಜಿ, ಸಂಧಾನ ಕೂಡ ಮಾಡಿದ್ದರು.

ಶಶಿಕಲಾ ನವೆಂಬರ್ 10ರಂದು ಊರಿನಿಂದ ಯಾರಿಗೂ ಹೇಳದೆ ತಾವರೆಕೆರೆ ಕೋಡಿ ಹತ್ತಿರ ಬಂದು ಮಗುವಿನೊಂದಿಗೆ ಹಗ್ಗಕಟ್ಟಿಕೊಂಡು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಶಿಕಲಾ ಮೂರು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಮೃತಳ ಅಣ್ಣ ರೇಣುಕಪ್ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೋಮವಾರ ಬೆಳಗ್ಗೆ ಕೆರೆ ಪಕ್ಕದ ದಾರಿ ಹೋಕರು ಅಪರಿಚತ ಶವ ಕೆರೆಯಲ್ಲಿ ತೇಲುತ್ತಿರುವ ಬಗ್ಗೆ ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಿಪಿಐ ಲೋಹಿತ್ ಪರಿಶೀಲಿಸಿ, ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಶವ ಹೊರ ತೆಗೆಸಿದ್ದಾರೆ.

‘ನನ್ನ ತಂಗಿಯ ಸಾವಿಗೆ ಆಕೆಯ ಗಂಡನ ಕಿರುಕುಳವೇ ಕಾರಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಸವರಾಜು ವಿರುದ್ಧ ರೇಣುಕಪ್ಪ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.