ಶಿರಸಿ: ವಿವಿಧ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ನಾಶಪಡಿಸಿದೆ ಎಂದು ಆರೋಪಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಇಂತಹ ಅವೈಜ್ಞಾನಿಕ ಕ್ರಮದ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದರು.

ನಗರದ ಅರಣ್ಯ ಭೂಮಿ ಹಕ್ಕು ಹೋರಾಟಗಾರ ಸಮಿತಿ ಕಚೇರಿಯಲ್ಲಿ ಅರಣ್ಯ ಇಲಾಖೆ ಮರ ನಾಶಪಡಿಸಿದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಅವರು, 'ಜಿಲ್ಲೆಯಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿಯೇ ಅವೈಜ್ಞಾನಿಕ ರೀತಿಯಲ್ಲಿ ಬೆಲೆ ಬಾಳುವ ಮರಗಳನ್ನು ಕತ್ತರಿಸಲಾಗಿದೆ. ಗಿಡ, ಮರಗಳನ್ನು ಕೆರೆ ದಡಕ್ಕೆ ಹಾಕಿ, ಅದರ ಮೇಲೆ ಮಣ್ಣು ಮುಚ್ಚಿ, ಮರ ಕಡಿದ ಸಾಕ್ಷ್ಯ ನಾಶಪಡಿಸಲಾಗುತ್ತಿದೆ' ಎಂದು ಆರೋಪಿಸಿದರು.

'ಅರಣ್ಯ ಪ್ರದೇಶದಲ್ಲಿ ನಡೆದ ಒಟ್ಟೂ ಕಾಮಗಾರಿ ಹಾಗೂ ಅರಣ್ಯ ಸಾಂಧ್ರತೆ ಪ್ರಮಾಣ ಅನುಪಾತ ತುಲನೆ ಮಾಡಿದರೆ ಲಕ್ಷದಷ್ಟು ಮರಗಳು ನಾಶಗೊಂಡಿದ್ದು ದೃಢಪಟ್ಟಿದೆ' ಎಂದರು.

'ಪ್ರತಿ ವರ್ಷ ಕಾಡುಪ್ರಾಣಿಗಳ ಓಡಾಟ ನಿರ್ಬಂಧಿಸಲು ನೂರಾರು ಮೀಟರ್ ಅಗಳ ತೆಗೆಯಲಾಗುತ್ತಿದೆ. ಜಿಲ್ಲೆಯಾದ್ಯಂತ ಪ್ರತಿ ವರ್ಷ 300ರಷ್ಟು ಕೆರೆಗಳನ್ನು ಅರಣ್ಯ ಪ್ರದೇಶದಲ್ಲಿ ಗಿಡ, ಮರ ಇದ್ದ ಜಾಗದಲ್ಲಿಯೇ ತೆಗೆಯಲಾಗುತ್ತಿದೆ' ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.