ವಾಲ್ಮೀಕಿ ಪೀಠಕ್ಕೆ ಹೆಚ್ಚಿನ ಅನುದಾನ ನೀಡಿದರೆ ನಶಿಸಿ ಹೋಗಬಹುದಾದ ಬುಡಕಟ್ಟು ಸಮುದಾಯಗಳ ಕುರಿತು ಸಂಶೋಧನೆ ನಡೆಸಲು ಅವಕಾಶ ಆಗುತ್ತದೆ
ಪ್ರೊ. ಡಿ.ವಿ.ಪರಮಶಿವಮೂರ್ತಿ ಕುಲಪತಿ
ಸಿದ್ದರಾಮಯ್ಯ ಪೋಷಣೆಯ ಕೂಸು
ಕುಲಪತಿಯಾಗಿದ್ದ ಪ್ರೊ. ಮಲ್ಲಿಕಾ ಘಂಟಿ ಅವರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1 ಕೋಟಿ ಅನುದಾನ ಒದಗಿಸಿದ್ದರಿಂದ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಯಾಗಿತ್ತು. ಕಟ್ಟಡಕ್ಕೆ ₹50 ಲಕ್ಷ ಮುಗಿದಿತ್ತು 2018ರಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ವಿಚಾರ ಸಂಕಿರಣಕ್ಕೆ ಲಕ್ಷಾಂತರ ಖರ್ಚಾಗಿತ್ತು. ಕೋವಿಡ್ ಸಮಯದಲ್ಲಿ ಪೀಠದ ಉಸಿರೇ ಕ್ಷೀಣಿಸಿತ್ತು. ಇದೀಗ ಸಾವಧಿ ಠೇವಣಿ ಮೊತ್ತ ₹15 ಲಕ್ಷದಲ್ಲಿ ಬರುವ ಬಡ್ಡಿಯಲ್ಲಿ ಪೀಠದ ಉಸಿರು ನಿಂತಿದೆ.