ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನಲ್ಲಿ ಕ್ರಸ್ಟ್ ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ನ ಎರಡನೇ ಎಲಿಮೆಂಟ್ ಅಳವಡಿಸಲು ಸಿದ್ಧತೆ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಒಂದು ಹಾಗೂ ಸಂಜೆಯ ವೇಳೆಗೆ ಇನ್ನೊಂದು ಗೇಟ್ ಅಳವಡಿಕೆ ಆಗುವ ನಿರೀಕ್ಷೆ ಇದೆ.

ಕನ್ನಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ಈ ಕಾರ್ಯಾಚರಣೆ ನಡೆಯಲಿದ್ದು, ಸಂಜೆ ನಾಯ್ಡು ಅವರು ಹೈದರಾಬಾದ್ಗೆ ತೆರಳಲಿದ್ದಾರೆ.

ಭಾನುವಾರ ಬಹುತೇಕ ವಿಶ್ರಾಂತಿ ದಿನ ಆಗಿರುವ ಸಾಧ್ಯತೆ ಇದ್ದು, ಸೋಮವಾರ ಬಾಕಿ ಉಳಿದ ಎರಡು ಗೇಟ್ ಗಳ ಅಳವಡಿಕೆ ನಡೆಯಲಿದೆ.

ಈ ಮೊದಲು ಅಂದಾಜಿಸಿದಂತೆ ಶನಿವಾರ ಬೆಳಿಗ್ಗೆ 9ಕ್ಕೆ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಸ್ಕೈ ವಾಕ್ ಅನ್ನು ಬೃಹತ್ ಟ್ರಕ್ ಮೂಲಕ ಹೊರಗಡೆ ಸಾಗಿಸುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು. 11.15ಕ್ಕೆ ಸ್ಕೈವಾಕ್ ಅನ್ನು ತೆರವುಗೊಳಿಸಲಾಯಿತು. ಬಳಿಕವಷ್ಟೇ ಎರಡನೇ ಗೇಟ್ ಎಲಿಮೆಂಟ್ ಅನ್ನು 19ನೇ ತೂಬಿನ ಬಳಿ ತರಲಾಯಿತು.

ಒಳಹರಿವು ಹೆಚ್ಚಳ: ಗೇಟ್ ಕೊಚ್ಚಿಹೋದ ದಿನದಿಂದೀಚೆಗೆ (ಆ.10) 36 ಟಿಎಂಸಿ ಅಡಿ ಗಿಂತಲೂ ಹೆಚ್ಚು ನೀರು ನದಿಗೆ ಹರಿದು ಹೋಗಿದೆ, ಆದರೆ ಶುಕ್ರವಾರದಿಂದೀಚೆಗೆ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 1,623.42 ಅಡಿ ನೀರಿದೆ. ಗರಿಷ್ಠ 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯದಲ್ಲಿ ಸದ್ಯ 71.13 ಟಿಎಂಸಿ ಅಡಿ ನೀರು ಸಂಗ್ರಹ ಇದೆ.
.TB Dam| ಈಗಾಗಲೇ 30 TMC ಉಳಿಸಿದ್ದೇನೆ, 90 TMC ನೀರು ನಿಶ್ಚಿತ: ಕನ್ನಯ್ಯ ನಾಯ್ಡು.ಗೇಟ್ ತಕ್ಷಣ ಅಳವಡಿಸದಿದ್ದರೆ 40 TMCಯಷ್ಟೇ ನೀರು ಇರುತ್ತಿತ್ತು: ಕನ್ನಯ್ಯ ನಾಯ್ಡು.ತುಂಗಭದ್ರಾ: ಗೇಟ್ ಅಳವಡಿಕೆಯ ಮೊದಲ ಎಲಿಮೆಂಟ್ ಯಶಸ್ವಿ; ಸಿಹಿ ಹಂಚಿ ಸಂಭ್ರಮ.ತುಂಗಭದ್ರಾ ಜಲಾಶಯ: ರಭಸದಿಂದ ಹರಿಯುವ ನೀರಿನಲ್ಲಿ ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿ.ತುಂಗಭದ್ರಾ ಅಣೆಕಟ್ಟೆ | ‘ಕೊಂಡಿ’ ಅವಾಂತರ: ಒಂದು ದಿನ ವ್ಯರ್ಥ.ತುಂಗಭದ್ರಾ ಅಣೆಕಟ್ಟೆ: ಗೇಟ್ ಅಳವಡಿಕೆ ಯತ್ನಕ್ಕೆ ‘ಕೊಂಡಿ’ ವಿಘ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.