ಸಂಡೂರಿನಲ್ಲಿ ಹೊಸಪೇಟೆಯ ನಾಯಕ ಎಂತಹ ಪ್ರಭಾವ ಬೀರಲು ಸಾಧ್ಯವಿದೆ ಎಂದು ಪ್ರಶ್ನೆ ಎದುರಾಗಬಹುದು. ಅದು ವಾಸ್ತವವೂ ಇರಬಹುದು. ಆದರೆ ಸಂಸದ ತುಕಾರಾಂ ಅವರು ಪತ್ನಿ ಹಾಗೂ ಅಭ್ಯರ್ಥಿ ಅನ್ನಪೂರ್ಣಾ ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಒಂದಿಷ್ಟು ಕಾಂಚಾಣವೂ ಅತ್ತ ಹರಿದಿದೆಯೇ ಎಂಬ ಪ್ರಶ್ನೆಯೂ ಇದೆ ಎಂದು ಮೂಲಗಳು ಹೇಳಿವೆ.