ಇಂಡಿ: ಗಂಡು ಕರುವಿನ ಮೇಲೆ ರೈತರ ನಿರ್ಲಕ್ಷ್ಯ, ತಾತ್ಸಾರ ಮನೋಭಾವನೆ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೆಣ್ಣು ಕರು ಖಾತರಿ ಯೋಜನೆಯಡಿ ತಾಲ್ಲೂಕಿಗೆ 170 ಡೋಸ್ ನಳಿಕೆ ನೀಡುವ ಗುರಿ ನೀಡಲಾಗಿದೆ.

ನಳಿಕೆ ನೀಡಿದ ಹಸು ಕೃತಕವಾಗಿ ಗರ್ಭ ಧರಿಸುವ ಜತೆಗೆ ಶೇ 90 ರಷ್ಟು ಖಚಿತವಾಗಿ ಹೆಣ್ಣು ಕರುವಿಗೆ ಜನ್ಮ ನೀಡುತ್ತದೆ. ಹಲವು ಪ್ರಯೋಗಗಳ ಮೂಲಕ ನಳಿಕೆ ಸಿದ್ದಪಡಿಸಲಾಗಿದ್ದು, ನಳಿಕೆ ಮೂಲಕ ಗರ್ಭ ಧರಿಸುವ ಹಸುಗಳು ಹೆಣ್ಣು ಕರುವಿಗೆ ಜನ್ಮ ನೀಡಿರುವ ಸಾಕಷ್ಟು ನಿದರ್ಶನಗಳಿವೆ. ಹೀಗಾಗಿ ತಾಲ್ಲೂಕಿನ ಹೋರಿಯ ಅಭಿವೃದ್ದಿ ಪಡಿಸಲಾದ ವೀರ್ಯ ನಳಿಕೆಗಳು ಪೂರೈಕೆಯಾಗಿವೆ.

ಪ್ರತಿ ತಾಲ್ಲೂಕಿಗೂ ಇಂತಿಷ್ಟು ಗುರಿಯ ಮೇರೆಗೆ ನಳಿಕೆಗಳನ್ನು ನೀಡಲಾಗಿದೆ. ಇಂಡಿ ತಾಲ್ಲೂಕಿಗೆ ಪ್ರಥಮ ಹಂತವಾಗಿ 170 ನಳಿಕೆಗಳನ್ನು ನೀಡಲಾಗಿದ್ದು, ಈ ಪೈಕಿ ಈಗಾಗಲೇ 85 ಹಸುಗಳಿಗೆ ನಳಿಕೆ ಹಾಕಲಾಗಿದೆ. ಟಗಸ್ಟ್ ತಿಂಗಳಲ್ಲಿ ಈ ಕಾರ್ಯ ನಡೆದಿದ್ದು, ಆ ಹಸುಗಳು ಜನ್ಮ ನೀಡುವುದನ್ನು ಕುತೂಹಲದಿಂದ ಎದುರು ನೋಡಲಾಗುತ್ತಿದೆ.

ಸದ್ಯ ಬೇರೆ, ಬೇರೆ ಜಿಲ್ಲೆಗಳಾದ ಕಾರವಾರ, ಮಂಡ್ಯ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಶೇ 50 ರಷ್ಟು ಯಶಸ್ವಿಯಾಗಿವೆ. ಈ ನಳಿಕೆಗಳ ಮೂಲಕ ಗರ್ಭ ಧರಿಸಿದ್ದ ಹಸುಗಳ ಪೈಕಿ ಶೇ 90 ರಷ್ಟು ಕರುಗಳಿಗೆ ಹೆಣ್ಣು ಕರುಗಳು ಹುಟ್ಟಿವೆ ಎಂಬುದೇ ಗಮನಾರ್ಹ. ಸಾಮಾನ್ಯವಾಗಿ ಹೈನುಗಾರಿಕೆ ಮಾಡುವ ಎಲ್ಲರೂ ತಮ್ಮ ಹಸುವಿಗೆ ಹೆಣ್ಣು ಕರುವೇ ಹುಟ್ಟಲಿ ಎಂದೇ ಹಂಬಲಿಸುತ್ತಾರೆ. ಹೆಣ್ಣು ಕರು ಆದರೆ ಹಾಲು ಉತ್ಪಾದನೆ ಆಗಲಿದ್ದು, ವರಮಾನ ಬರಲಿದೆ ಎಂಬುದು ಇದಕ್ಕೆ ಕಾರಣ. ಇದೀಗ ಕೇಂದ್ರ ಪರಿಚಯಿಸಿರುವ ಈ ಹೆಣ್ಣು ಕರು ಗ್ಯಾರಂಟಿ ಯೋಜನೆಯಿಂದ ಆ ಹಂಬಲ ಈಡೇರುತ್ತದೆ. ಆ ಮೂಲಕ ಬೀದಿ ಪಾಲಾಗುತ್ತಿದ್ದ ಗಂಡು ಕರುಗಳ ಸಂಖ್ಯೆಯು ತಪ್ಪಲಿದೆ.

ಹಸುಗಳು ಗಂಡು ಕರುಗಳಿಗೆ ಜನ್ಮ ನೀಡಿದರೆ ಅವುಗಳನ್ನು ಕೆಲ ತಿಂಗಳಷ್ಟೇ ಸಲುಹಿ ಬಳಿಕ ಕಟುಕರಿಗೆ ಇಲ್ಲವೆ ಬಜಾರಕ್ಕೆ ಒಯ್ದು ಮಾರಾಟ ಮಾದುವದು, ಇಲ್ಲವೆ ದೇವರಿಗೆ ಅಪರ್ಿಸುವದು, ಬೀದಿಗೆ ಬಿಡುವದೇ ಹೆಚ್ಚು. ಹೀಗಾಗಿ ಕೇಂದ್ರ ಸರ್ಕಾರ ಹೆಣ್ಣು ಕರುವಿಗೆ ನೀಡುವಂತಹ ನಳಿಕೆಗಳನ್ನು ಅಭಿವೃದ್ದಿ ಪಡಿಸಲು ಸೂಚನೆ ನೀಡಿತ್ತು.

ಹೈನುಗಾರಿಕೆಗೆ ಉತ್ತೇಜನ. ಗಂಡು ಕರು ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಣ್ಣು ಕರು ಗ್ಯಾರಂಟಿ ಯೋಜನೆ ಅಡಿ ತಾಲ್ಲೂಕಿಗೆ 170 ಡೋಸ್ ನಳಿಕೆ ಪೂರೈಸಿದೆ
–ಡಾ.ರಾಜುಕಾರ ಅಡಕಿ, ಹಿರಿಯ ಪಶು ವೈದ್ಯಾಧಿಕಾರಿ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.