ಯರಗೋಳ (ಯಾದಗಿರಿ): ಸುತ್ತಲಿನ ಗ್ರಾಮಗಳಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಬೆಟ್ಟಗಳಲ್ಲಿ ಹಸಿರು ದೃಶ್ಯ ನಿರ್ಮಾಣವಾಗಿದೆ.

ಹತ್ತಿಕುಣಿ, ಬಾಚವಾರ, ಕೋಟಗೇರಾ, ಮೋಟ್ನಳ್ಳಿ, ಗುಲಗುಂಜಿ, ಕಟ್ಟಿಗೆ ಶಹಾಪುರ, ಸಮಣಾಪುರ, ಸುತಾರ್ ಹೊಸಳ್ಳಿ ಗ್ರಾಮದ ಗುಡ್ಡಗಳಲ್ಲಿ ಮಳೆಯಿಂದಾಗಿ ಮರ-ಗಿಡಗಳು ಚಿಗುರೊಡದಿವೆ. ಹಚ್ಚ ಹಸಿರಾಗಿ ತಂಪಾದ ಗಾಳಿ ಬೀಸುತ್ತಿದೆ.

ಹೊಂಡಗಳಲ್ಲಿ ನೀರು ಸಂಗ್ರಹವಾಗಿದ್ದು, ಪ್ರಾಣಿ, ಪಕ್ಷಿಗಳಿಗಳಾದ ನವಿಲು, ಮೊಲ, ನರಿ, ಕಾಡು, ತೋಳ ಕಾಡು ಹಂದಿಗಳು ಹೆಚ್ಚಿನ ಪ್ರಮಾಣದಲ್ಲಿ ಈ ವಾಸ ಮಾಡುತ್ತಿವೆ.

ಯರಗೋಳ ಸುತ್ತಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಸೀತಾಫಲ ಹಣ್ಣಿನ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ.

ಗುಲಗುಂಜಿ ಗ್ರಾಮದ ಕಾಡು ಪ್ರದೇಶದಲ್ಲಿ ನೀಲದ ಹಣ್ಣಿನ ಗಿಡಗಳಿವೆ.

ಕೋಟಗೇರಾ ಗ್ರಾಮದ ಗುಡ್ಡದಲ್ಲಿನ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರವಾಸಿಗರು ಗುಡ್ಡದಲ್ಲಿ ಹರಿಯುವ ನೀರು ನೋಡಿ ಸಂತಸ ಪಡುತ್ತಿದ್ದಾರೆ. ಯುವಕರು, ಯುವತಿಯರು ಗೆಳೆಯರೊಂದಿಗೆ ತೆರಳಿ ಜಲಪಾತ ವೀಕ್ಷಿಸಿ, ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ ಪಡುತ್ತಿದ್ದಾರೆ.

ಗ್ರಾಮದ ಗೃಹಿಣಿ ವೀಣಾ ವಿ ಚಂದನಕೇರಿ 'ಪ್ರಜಾವಾಣಿ' ಯೊಂದಿಗೆ ಮಾತನಾಡಿ, ಪ್ರತಿ ಮಳೆಗಾಲದಲ್ಲಿ ಕೋಟಗೇರಾ ಜಲಪಾತ ಕೆಲವು ದಿನಗಳ ಕಾಲ ರಮಣೀಯವಾಗಿ ಕಾಣುತ್ತದೆ. ಜಲಪಾತ ವೀಕ್ಷಣೆಗೆ ನೂರಾರು ಸಂಖ್ಯೆಯ ಪರಿಸರ ಪ್ರಿಯರು ಆಗಮಿಸಿ ವೀಕ್ಷಿಸಿ ಸಂಭ್ರಮಿಸುತ್ತಾರೆ' ಎಂದರು.

ಜಲಪಾತಕ್ಕೆ ಹೋಗುವ ಮಾರ್ಗ: 'ಯಾದಗಿರಿ ಜಿಲ್ಲಾ ಕೇಂದ್ರದಿಂದ 20ಕಿ. ಮೀ ದೂರವಿದ್ದು, ಬಂದಳ್ಳಿ ಮಾರ್ಗವಾಗಿ ಹೊನಗೇರಾ, ಕಟ್ಟಿಗೆ ಶಾಪುರ ಗ್ರಾಮದ ಮೂಲಕ ತೆರಳಬಹುದು, ಯಾದಗಿರಿಯಿಂದ ಹತ್ತಿಕುಣಿ, ಮಾಟನಳ್ಳಿ ಗ್ರಾಮದಿಂದ ಕೊಟಗೇರಾ ಕೆ ತೆರಳಬಹುದು' ಎಂದು ವೆಂಕಟೇಶ್ ಎಸ್ ಚಂದನ್ ಕೇರಿ ತಿಳಿಸಿದರು.

ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡಗಳಲ್ಲಿ ನೀರು ಹತ್ತಿಕುಣಿ ಜಲಾಶಯಕ್ಕೂ ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗಲು ಕ್ಷಣ ಗಣನೆ ಆರಂಭವಾಗಿದೆ. ಸುತ್ತಲಿನ ಗುಡ್ಡಗಳಲ್ಲಿ ಹಸಿರು ವಾತಾವರಣ ನಿರ್ಮಾಣವಾಗಿದೆ.

ಬಹುತೇಕ ಗ್ರಾಮಗಳ ಕೆರೆ, ಹಳ್ಳ, ಕೊಳ್ಳಗಳಲ್ಲಿ ಮಳೆ ನೀರು ಸಂಗ್ರಹವಾಗಿವೆ. ರೈತರು ಭತ್ತ ನಾಟಿಗೆ ಮಾಡಿದ ಗದ್ದೆಗಳಲ್ಲಿ ನೀರು ಹೊಕ್ಕಿವೆ. ಬೀಳುಬಿದ್ದ ಹೊಲಗಳಲ್ಲಿ ಹಸಿರು ಹುಲ್ಲು ಬೆಳೆದಿದ್ದು, ಜಾನುವಾರುಗಳಿಗೆ ಅನುಕೂಲವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.