ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ದೇಗುಲ ಸಂರಕ್ಷಣೆ ಇಲ್ಲದೆ ಹಾಳಾಗಿದೆ
ಸುರಪುರ ತಾಲ್ಲೂಕಿನ ವಾಗಣಗೇರಿಯ ಸುಪ್ರಸಿದ್ಧ ಕೋಟೆ
ಶಿರವಾಳ ಗ್ರಾಮದ ಎಲ್ಲಾ ದೇವಾಲಯಗಳ ಸಮಗ್ರ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾಮಗಾರಿ ಕೈಗೆತ್ತಿಕೊಳ್ಳಲು ₹75 ಕೋಟಿ ಅನುದಾನ ಒದಗಿಸಲು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲಾಗುವುದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗಿದ್ದು ನಾಮಫಲಕಗಳು ಅಲ್ಲಿಂದಲೇ ಬರಲಿವೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸಲಾಗುವುದು
ರಾಮಚಂದ್ರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಸುರಪುರ ಮತ್ತು ಪಕ್ಕದ ಹುಣಸಗಿ ತಾಲ್ಲೂಕು ಹಲವಾರು ಪ್ರವಾಸಿ ತಾಣಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಪ್ರವಾಸೋದ್ಯಮ ಇಲಾಖೆ ಈ ತಾಣಗಳ ಬಗ್ಗೆ ಮುತುವರ್ಜಿ ವಹಿಸಬೇಕು
ರಾಜಶೇಖರ ವಿಭೂತಿ ಇತಿಹಾಸ ಲೇಖಕರು
ಧಾರ್ಮಿಕ ಮತ್ತು ಐತಿಹಾಸಿಕವಾಗಿ ಸಮೃದ್ಧಿಯಾಗಿರುವ ಸುರಪುರ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಗ್ಗೆ ಇಲ್ಲಿನ ಜನರು ಧ್ವನಿ ಎತ್ತುವ ಅವಶ್ಯಕತೆ ಇದೆ
ಶ್ರೀನಿವಾಸ ಜಾಲವಾದಿ ಸಾಹಿತಿ
ಇತಿಹಾಸವಿರುವ ಸಂಗಮದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲ. ಬೋಟಿಂಗ್ ವ್ಯವಸ್ಥೆ ತೋಟದ ನಿರ್ಮಾಣ ಮಕ್ಕಳಿಗಾಗಿ ವ್ಯವಸ್ಥೆ ಶೌಚಾಲಯಗಳ ನಿರ್ಮಾಣವಾಗಬೇಕು
ಕರುಣೇಶ್ವರ ಸ್ವಾಮೀಜಿ ಸಂಗಮೇಶ್ವರ ದೇವಸ್ಥಾನದ ಪೀಠಾಧಿಪತಿ ಸಂಗಮ
ಗವಿ ಸಿದ್ದಲಿಂಗೇಶ್ವರಕ್ಕೆ ನಾವು ಕುಟುಂಬ ಸಮೇತ ಹಲವು ಬಾರಿ ಬಂದಿದ್ದೇವೆ. ಇಲ್ಲಿಗೆ ಬರುವ ರಸ್ತೆಯನ್ನು ಯಾಕೆ ಸುಧಾರಿಸುತ್ತಿಲ್ಲವೋ ತಿಳಿಯದು. ಜತೆಗೆ ಇಂತಹ ತಾಣಗಳಲ್ಲಿ ಬರುವವರಿಗೆ ಕನಿಷ್ಟ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಿದರೆ ಚೆನ್ನ
ಗೀತಾ ಪಾಂಡುರಂಗ ಪ್ರವಾಸಿಗ
ಗುರುಮಠಕಲ್ ಪಟ್ಟಣದ ಹೊರವಲದಲ್ಲಿ ನಾರಾಯಣಪೇಟ್ ಹೋಗುವ ರಸ್ತೆಯಲ್ಲಿನ ಮಲ್ಲಾ ಕಾಡಿನಲ್ಲಿರುವ ಬಂಡಲೋಗು ಜಲಪಾತಕ್ಕೆ ನಡೆದುಕೊಂಡೆ ಹೋಗಬೇಕು. ಆದರೆ ದೂರದಿಂದ ಬರುವವರಿಗೆ ದಾರಿ ಎಲ್ಲಿದೆಎನ್ನುವುದು ತಿಳಿಯುತ್ತಿಲ್ಲ. ಫಲಕಗಳು ಅಳವಡಿಸಿದರೆ ಸಹಾಯವಾಗುತ್ತದೆ