ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ವಿಶ್ವದೆಲ್ಲೆಡೆ ಉತ್ಸಾಹದಿಂದ ಆಚರಿಸಲಾಗಿದೆ. ಇದೇ ವೇಳೆ ಹಲವು ಸೆಲಿಬ್ರಿಟಿಗಳು ಯೋಗ ಮಾಡಿ ತಮ್ಮ ಅಭಿಮಾನಿಗಳಿಗೆ ಸದಾ ಫಿಟ್ ಆಗಿ ಇರಿ, ಆರೋಗ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ.

ತುಪ್ಪದ ಬೆಡಗಿ ನಟಿ ರಾಗಿಣಿ ತಪ್ಪದೇ ಫಿಟ್‌ನೆಸ್ ಬಯಸುವವರು. ಹಾಗೇ ಅದಕ್ಕಾಗಿ ಪ್ರತಿದಿನ ಯೋಗ ಮಾಡುತ್ತಾರೆ. ತಮ್ಮ ಸೌಂದರ್ಯದ ಗುಟ್ಟು ಯೋಗ ಕೂಡ ಒಂದು ಎಂದು ಅವರು ಈಗಾಗಲೇ ಅನೇಕ ಬಾರಿ ಹೇಳಿದ್ದಾರೆ.

ಯೋಗ ದಿನದ ಪ್ರಯುಕ್ತ ಯೋಗದ ವಿವಿಧ ಭಂಗಿಗಳ ಫೋಟೊ ಮತ್ತು ವಿಡಿಯೊವನ್ನು ರಾಗಿಣಿ ಹಂಚಿಕೊಂಡಿದ್ದು ಅವುಗಳನ್ನು ಅಭಿಮಾನಿಗಳು ಸಕತ್ ಇಷ್ಟಪಟ್ಟಿದ್ದಾರೆ.

ಅಲ್ಲದೇ ರಾಗಿಣಿ ಅವರ ಯೋಗ ನೋಡಿ ನೀವು ರಾಗಿಣಿ ಅಲ್ಲ ಯೋಗಿಣಿ ಎಂದು ಕಮೆಂಟಿಸಿದ್ದಾರೆ. ಇದೇ ರೀತಿ ಇಂದು ಅನೇಕ ನಟ ನಟಿಯರು ಯೋಗದ ಫೋಟೊ ವಿಡಿಯೊ ಹಂಚಿಕೊಂಡು ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದಾರೆ.

ರಾಗಿಣಿ ಸದ್ಯ ಮಲಯಾಳಂ ನ ಪ್ಯಾನ್ ಇಂಡಿಯಾ ಸಿನಿಮಾ ಶೀಲಾ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.