ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್.ರೆಹಮಾನ್ ಅವರ ಮಗಳು ಖತೀಜಾ ರೆಹಮಾನ್, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಹಲಿತಾ ಶಮೀಮ್ ತಮಿಳಿನಲ್ಲಿ ‘ಮಿನಿಮಿನಿ‘ (MiniMini) ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಖತೀಜಾ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹಲಿತಾ ಶಮೀಮ್, ಖತೀಜಾ ಜೊತೆಗಿನ ಪೋಟೊವನ್ನು ಹಂಚಿಕೊಂಡಿದ್ದಾರೆ. ' ಖತೀಜಾ ಅವರೊಂದಿಗೆ ಕೆಲಸ ಮಾಡಲು ತುಂಬಾ ಖುಷಿ ಎನಿಸುತ್ತಿದೆ. ಅವರೊಬ್ಬ ಅದ್ಭುತ ಪ್ರತಿಭೆ. ಅತ್ಯುತ್ತಮ ಹಾಡುಗಾರ್ತಿಯಾಗಿರುವ ಅವರು ಉತ್ತಮ ಸಂಗೀತ ಸಂಯೋಜಕಿಯೂ ಹೌದು. ಒಳ್ಳೆ ಹಾಡುಗಳಿಗಾಗಿ ನಿರೀಕ್ಷಿಸಿರಿ' ಎಂದು ಬರೆದುಕೊಂಡಿದ್ದಾರೆ.

ಹಲಿತಾ ಶಮೀಮ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಖತೀಜಾ ರೆಹಮಾನ್, ' ‘ಮಿನಿಮಿನಿ' ಚಿತ್ರತಂಡದ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತುಂಬಾ ಧನ್ಯವಾದಗಳು. ಇದು ನಿಮ್ಮೊಂದಿಗೆ ಕೆಲಸ ಮಾಡುತ್ತಾ ಚಿತ್ರರಂಗದೊಂದಿಗೆ ಬೆಳೆಯುವ ಅವಕಾಶವಾಗಿದೆ' ಎಂದು ಹೇಳಿದ್ದಾರೆ.

2010ರಲ್ಲಿ ತಮಿಳು ನಟ ರಜನಿಕಾಂತ್ ಅವರು ನಟಿಸಿರುವ ‘ಎಂಥಿರನ್‘ ಚಿತ್ರದ ‘ಪುತಿಯ ಮನಿಧಾ‘ ಹಾಡನ್ನು ಹಾಡುವ ಮೂಲಕ ಖತೀಜಾ ಸಂಗೀತ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದರು. 2021ರಲ್ಲಿ ಬಿಡುಗಡೆಯಾದ ಹಿಂದಿಯ ‘ಮಿಮಿ‘ ಚಿತ್ರದ ‘ರಾಕ್ ಅ ಬೇಬಿ ಬೇಬಿ‘ ಹಾಡನ್ನೂ ಖತೀಜಾ ಹಾಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್–2‘ ಚಿತ್ರದ ‘ಚಿನ್ನಂಜಿರು ನಿಲವೇ‘ ಹಾಡನ್ನು ಹಾಡುವ ಮೂಲಕ ಉತ್ತಮ ಗಾಯಕಿ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.