ಅಮೆರಿಕದ ವೃತ್ತಿನಿರತ ಕುಸ್ತಿಪಟು, ಡೆಡ್ಮ್ಯಾನ್ ಖ್ಯಾತಿಯ 'ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್'ನ (ಡಬ್ಳ್ಯುಡಬ್ಳ್ಯುಇ) ಸ್ಟಾರ್ ದಿ ಅಂಡರ್ಟೇಕರ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡುವೆ ಪುನಃ ಕುಸ್ತಿ ಪಂದ್ಯವೇ? ಈ ಮೊದಲು ನಡೆದಿತ್ತಾ? ಎಂಬ ಕುತೂಹಲಗಳು ಕಾಡುತ್ತಿರಬಹುದು.

25 ವರ್ಷಗಳ ಹಿಂದೆ ತೆರೆ ಕಂಡ ಬಾಲಿವುಡ್ ಸಿನಿಮಾ 'ಕಿಲಾಡಿಯೊ ಕಾ ಕಿಲಾಡಿ' ಸಿನಿಮಾ ನೋಡಿದವರಿಗೆ ಅಂಡರ್ಟೇಕರ್ ಮತ್ತು ಅಕ್ಷಯ್ ಕುಮಾರ್ ನಡುವಿನ ಕುಸ್ತಿ ಬಗ್ಗೆ ಗೊತ್ತಿರುತ್ತದೆ. 1996ರಲ್ಲಿ ಉಮೇಶ್ ಮೆಹ್ರಾ ನಿರ್ದೇಶನದಲ್ಲಿ ಬಿಡುಗಡೆಯಾದ ಕಿಲಾಡಿಯೊ ಕಾ ಕಿಲಾಡಿ ಚಿತ್ರದಲ್ಲಿ ಅಂಡರ್ಟೇಕರ್ ವಿರುದ್ಧ ಅಕ್ಷಯ್ ಕುಮಾರ್ ಭರ್ಜರಿ ಫೈಟ್ ಮಾಡಿದ್ದರು. ಸೋಲರಿಯದ ಸರದಾರ, ಸತ್ತರೂ ಎದ್ದು ಬರುವ ಅಂಡರ್ಟೇಕರ್ಗೆ ಅಕ್ಷಯ್ ಕುಮಾರ್ ಸೋಲಿನ ರುಚಿ ತೋರಿಸಿದ್ದರು.

ಸಿನಿಮಾಗೆ 25 ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿದ್ದ ಅಕ್ಷಯ್ ಕುಮಾರ್ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಮೀಮ್ ಒಂದನ್ನು ಶೇರ್ ಮಾಡಿದ್ದು, ಸ್ವತಃ ಡಬ್ಳ್ಯುಡಬ್ಳ್ಯುಇ ನಲ್ಲೂ ಸದ್ದು ಮಾಡಿದೆ. ಅಂಡರ್ಟೇಕರ್ ಅವರನ್ನು ಸೋಲಿಸಿದವರ ಪೈಕಿ ನಾನು ಒಬ್ಬ ಎಂದು ಕೈ ಎತ್ತಿರುವ ಚಿತ್ರವನ್ನು ಟ್ವಿಟರ್ನಲ್ಲಿ ಅಕ್ಷಯ್ ಹಂಚಿಕೊಂಡಿದ್ದರು. ಬ್ರಾಕ್ ಲೆಸ್ನರ್, ಟ್ರಿಪಲ್ ಎಚ್ ಮತ್ತು ರೋಮನ್ ರೈನ್ಸ್ ಜೊತೆ ತಮ್ಮ ಫೋಟೊವನ್ನು ಅಕ್ಷಯ್ ಪೋಸ್ಟ್ ಮಾಡಿದ್ದಾರೆ. ಈ ನಡುವೆ ಅಂಡರ್ಟೇಕರ್ ಪಾತ್ರವನ್ನು ನಟ ಬ್ರಿಯಾನ್ ಲೀ ನಿರ್ವಹಿಸಿದ್ದರು ಎಂಬುದನ್ನು ತಿಳಿಸಲು ಅಕ್ಷಯ್ ಕುಮಾರ್ ಮರೆತಿಲ್ಲ.

ಸ್ವತಃ ಅಂಡರ್ಟೇಕರ್ ಅವರು ಅಕ್ಷಯ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, 'ನಿಜವಾದ ಮರು ಪಂದ್ಯಕ್ಕೆ ಯಾವಾಗ ಸಿದ್ಧರಿದ್ದೀರಿ ಎಂಬುದನ್ನು ಮೊದಲು ನನಗೆ ತಿಳಿಸಿ' ಎಂದು ಸವಾಲು ಎಸೆದಿದ್ದಾರೆ. ಇವರಿಬ್ಬರ ನಡುವಿನ ಕುಸ್ತಿಗೆ ಡಬ್ಳ್ಯುಡಬ್ಳ್ಯುಇ ಇಂಡಿಯಾ ಬೆಂಬಲ ಘೋಷಿಸಿದೆ. ಡಬ್ಳ್ಯುಡಬ್ಳ್ಯುಇ ಅಭಿಮಾನಿಗಳು ಮತ್ತು ಅಕ್ಷಯ್ ಕುಮಾರ್ ಅಭಿಮಾನಿಗಳು ಭಾರಿ ಖುಷಿಯಾಗಿದ್ದಾರೆ.

'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ

ನಿಜಕ್ಕೂ ಇವರಿಬ್ಬರ ನಡುವೆ ಕುಸ್ತಿ ನಡೆಯುತ್ತದೊ, ಇಲ್ಲವೊ ಆದರೆ ಸಾಮಾಜಿಕ ತಾಣಗಳಲ್ಲಿ ಮೀಮ್ ಪೋಸ್ಟ್ಗಳ ಸುರಿಮಳೆಗರೆಯುತ್ತಿದ್ದು, ನೆಟ್ಟಿಗರಿಗೆ ಪೂರ್ತಿ ಮನರಂಜನೆ ನೀಡುತ್ತಿವೆ. ಅಕ್ಷಯ್ ಕುಮಾರ್ ಪೋಸ್ಟ್ ನೋಡಿದವರಂತೂ ಬಿದ್ದೂಬಿದ್ದು ನಗುತ್ತಿದ್ದಾರೆ.

ಆದರೆ ಒಂದೆಡೆ ಚೋಕ್ ಸ್ಲಾಮ್ ಹೊಡೆತ ಕೊಡಲು ಅಂಡರ್ಟೇಕರ್ ಸಿದ್ಧರಾಗಿದ್ದರೆ, ಇತ್ತ ಅಕ್ಷಯ್ ಕುಮಾರ್ ತಮ್ಮ ಇನ್ಶೂರೆನ್ಸ್ ಹುಡುಕಾಟದಲ್ಲಿ ತೊಡಗಿದ್ದಾರೆ. ಹೌದು, 'ಮೊದಲು ನನ್ನ ಇನ್ಶೂರೆನ್ಸ್ ಪರಿಶೀಲಿಸಲು ಅವಕಾಶ ಕೊಡಿ, ಆಮೇಲೆ ವಿಚಾರ ತಿಳಿಸುತ್ತೇನೆ ಬ್ರೋ!' ಎಂದು ಅಕ್ಷಯ್ ಕುಮಾರ್ ಕಮೆಂಟ್ ಮಾಡುವ ಮೂಲಕ ಮೆಲ್ಲಗೆ ಜಾರಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.