ಚೆನ್ನೈ: ತೆಲುಗಿನ ಲವ್ ರೆಡ್ಡಿ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ನಟ ಎನ್.ಟಿ. ರಾಮಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಅಭಿಪ್ರಾಯ ಪಡೆಯಲು ಚಿತ್ರತಂಡ ಗುರುವಾರ ಹೈದರಾಬಾದ್ನ ಚಿತ್ರಮಂದಿರವೊಂದಕ್ಕೆ ಬಂದಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಚಿತ್ರ ವೀಕ್ಷಿಸಿದ ಬಳಿಕ ಮಹಿಳೆಯೊಬ್ಬರು ಏಕಾಏಕಿ ಓಡಿ ಬಂದು ರಾಮಸ್ವಾಮಿ ಅವರ ಶರ್ಟ್ ಕಾಲರ್ ಹಿಡಿದು ಕೆನ್ನೆಗೆ ಹೊಡೆಯಲು ಯತ್ನಿಸಿದ್ದು, ತಕ್ಷಣ ಅಲ್ಲಿದ್ದವರು ಮಹಿಳೆಯನ್ನು ಹಿಡಿದೆಳೆದಿರುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.

ಸಿನಿಮಾದಲ್ಲಿ ನಟ ಮತ್ತು ನಟಿಯ ಪ್ರೀತಿಗೆ ಅಡ್ಡವಾಗಿ ಖಳನಾಯಕನ ಪಾತ್ರ ಮಾಡಿದ್ದಕ್ಕೆ, ಮಹಿಳೆ ರಾಮಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ರಾಮಸ್ವಾಮಿ ಕೇವಲ ತೆಲುಗು ನಟರಲ್ಲ. ಕನ್ನಡದಲ್ಲೂ ಧಾರಾವಾಹಿ, ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ.

ವಿಡಿಯೊದಲ್ಲಿನ ದೃಶ್ಯಗಳು ಕೇವಲ ಸಿನಿಮಾ ಪ್ರಚಾರಕ್ಕೆ ಮಾಡಿದ ತಂತ್ರ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.