ಬ್ರಾಸಿಲಿಯಾ: ಶುಕ್ರವಾರ ಬ್ರೆಜಿಲ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ಮರಿಲಿಯಾ ಮೆಂಡೊಂಕಾ ಅವರು ಮೃತಪಟ್ಟಿದ್ದಾರೆ.

ಬ್ರೆಜಿಲ್‌ನ ಮಿನಾಸ್ ಗೆರೈಸ್ ಎಂಬ ಪ್ರಾಂತ್ಯದಲ್ಲಿ ಲಘು ವಿಮಾನ ಪತನಗೊಂಡು ಈ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಪೈಲೆಟ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮೆಂಡೊಂಕಾ ಅವರು ಮಿನಾಸ್‌ಗೆ ಸಂಗೀತ ಕಾರ್ಯಕ್ರಮ ನೀಡಲು ತೆರಳುತ್ತಿದ್ದರು.

'ಸಂಬಂಧಿಸಿದ ಪ್ರಾಧಿಕಾರದಿಂದ ಘಟನೆಯ ತನಿಖೆಯನ್ನು ನಡೆಸಲು ಆದೇಶಿಸದಲಾಗಿದೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಇವಾನ್ ಲೋಪ್ಸ್ ತಿಳಿಸಿದ್ದಾರೆ.

‘ಘಟನೆಗೆ ನಿರ್ಧಿಷ್ಟ ಕಾರಣ ಏನೆಂಬುದು ಪತ್ತೆಯಾಗಿಲ್ಲ. ಆದರೆ, ಟವರ್ ಒಂದಕ್ಕೆ ವಿಮಾನದ ರೆಕ್ಕೆ ತಾಗಿದ್ದರಿಂದ ಅದು ಪತನಗೊಂಡು ಜಲಪಾತವೊಂದರಲ್ಲಿ ಬಿದ್ದು ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ'ಎಂದು ಪತ್ರಿಕಾಗೋಷ್ಟಿಯಲ್ಲಿ ಇವಾನ್ ಲೂಪ್ಸ್ ತಿಳಿಸಿದ್ದಾರೆ.

ಮರಿಲಿಯಾ ಮೆಂಡೊಂಕಾ ಅವರು 2019 ರಲ್ಲಿ ಪ್ರತಿಷ್ಟಿತ ಲ್ಯಾಟಿನ್ ಗ್ರ್ಯಾಮಿ ಪ್ರಶಸ್ತಿಯನ್ನು ಅವರ ‘sertanejo'ಎಂಬ ಅಲ್ಬಂ ಹಾಡುಗಳಿಗೆ ಪಡೆದಿದ್ದರು. ಈ ಖ್ಯಾತ ಗಾಯಕಿಗೆ 2.20 ಕೋಟಿ ಜನ ಯೂಟ್ಯೂಬ್‌ನಲ್ಲಿ ಫಾಲೋವರ್ಸ್ ಇದ್ದಾರೆ. ಅಲ್ಲದೇ ಇವರು ಸಂಗೀತ ಕ್ಷೇತ್ರದ ‘ಹಾಟೆಸ್ಟ್‘ ಗಾಯಕಿ ಎಂಬ ಬಿರುದನ್ನೂ ಕೂಡ ಹೊಂದಿದ್ದರು.

ಇದನ್ನೂ ಓದಿ:Photos; ಪತಿ ನಿಕ್ ಜೋನಸ್ ಜೊತೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.