ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್ ಲೋಕ್’ ವೆಬ್ ಸರಣಿಯಲ್ಲಿ ಇರುವ ಸಂಭಾಷಣೆಯೊಂದನ್ನು ತೆಗೆಯಬೇಕು ಎಂದು ಗೂರ್ಖಾ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಯೊಂದು ಆಗ್ರಹಿಸಿದೆ. ಭಾರತೀಯ ಗೂರ್ಖಾ ಯುವ ಪರಿಸಂಘ ಎಂಬುದು ಈ ಸಂಘಟನೆಯ ಹೆಸರು.

ಈ ಸರಣಿಯಲ್ಲಿ ಒಂದು ಸಂಭಾಷಣೆಯಲ್ಲಿ ನಿಂದನಾತ್ಮಕ ಮಾತುಗಳು ಇವೆ. ಪಾತ್ರವೊಂದನ್ನು ಉದ್ದೇಶಿಸಿ ಆಡಿರುವ ಆ ಮಾತುಗಳು, ಗೂರ್ಖಾ ಸಮುದಾಯವನ್ನು ನೇರವಾಗಿ ನಿಂದಿಸುವಂತೆ ಇವೆ ಎಂದು ಈ ಸಂಘಟನೆ ಆರೋಪಿಸಿದೆ.

‘ಈ ಸಂಭಾಷಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಹಾಗೆಯೇ, ಇದನ್ನು ಮ್ಯೂಟ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇವೆ’ ಎಂದು ಸಂಘಟನೆ ಹೇಳಿದೆ. ಈ ಸಂಭಾಷಣೆಯ ವಿಚಾರವಾಗಿ ಅನುಷ್ಕಾ ಅವರಿಗೆ ವಕೀಲರೊಬ್ಬರು ನೋಟಿಸ್ ಜಾರಿಗೊಳಿಸಿದ್ದಾರೆ ಎಂಬ ವರದಿಗಳು ಬಾಲಿವುಡ್ ಅಂಗಳದಿಂದ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.