ಶಿರಹಟ್ಟಿ ವ್ಯಾಪ್ತಿಯಲ್ಲಿ ಆವೃತ್ತವಾಗಿರುವ ಕಪ್ಪತ್ತಗುಡ್ಡದ ವಿಹಂಗಮ ದೃಶ್ಯ
ಶಿರಹಟ್ಟಿ ವ್ಯಾಪ್ತಿಯಲ್ಲಿ ಆವೃತ್ತವಾಗಿರುವ ಕಪ್ಪತ್ತಗುಡ್ಡದ ವಿಹಂಗಮ ದೃಶ್ಯ
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಚಿರತೆ
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳ ಅಧ್ಯಯನ ನಡೆಸಿದ ಅರಣ್ಯ ಇಲಾಖೆ ತಂಡ
ಕಪ್ಪತ್ತಗುಡ್ಡದಲ್ಲಿ ಪ್ರಾಣಿಗಳಿಗಾಗಿ ನಿರ್ಮಿಸಿರುವ ಕೃತಕ ಹೊಂಡ
ವನ್ಯಜೀವಿ ಸಸ್ಯ ಸಂಪತ್ತು ವೃದ್ಧಿಸಲು ಕಾರಣವೇನು?
ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಣೆ ಮಾಡಿದ ನಂತರ ಮಾನವ ಹಸ್ತಕ್ಷೇಪ ತುಂಬ ಕಡಿಮೆ ಆಗಿದೆ. ಕಳ್ಳ ಬೇಟೆ ತಡೆಗೆ ಅರಣ್ಯ ಇಲಾಖೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ ಗಸ್ತು ಬಿಗಿಗೊಳಿಸಿದೆ. ಬೇಸಿಗೆ ಸಮಯದಲ್ಲಿ ವನ್ಯಜೀವಿಗಳು ಕುಡಿಯುವ ನೀರು ಅರಸಿ ಜನವಸತಿಯ ಸನಿಹಕ್ಕೆ ಬರುತ್ತಿದ್ದವು. ಇದನ್ನು ತಪ್ಪಿಸಲು ಕಪ್ಪತ್ತಗುಡ್ಡದ ವಿವಿಧ ಭಾಗಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿಸಿ ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ. ‘ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಆಗಿರುವುದರಿಂದ ಒಂದು ಪ್ರಾಜೆಕ್ಟ್ ಮಾಡಿಕೊಂಡು ವಿಶೇಷ ಅಧ್ಯಯನ ನಡೆಸಲಾಗುತ್ತಿದೆ. ಯಾವುದೇ ಜಾಗವನ್ನು ಸಂರಕ್ಷಿಸಿದರೆ ಅಲ್ಲಿ ಕಾಡು ಹೆಚ್ಚುತ್ತದೆ. ಪ್ರಾಣಿಗಳ ಸಂಖ್ಯೆಯೂ ವೃದ್ಧಿಸುತ್ತದೆ. ಆಹಾರ ಸರಪಳಿ ಬಿಗಿಗೊಂಡಂತೆ ಎಲ್ಲವೂ ಸಮೃದ್ಧಗೊಳ್ಳುತ್ತದೆ’ ಎಂದು ಸಿಸಿಎಫ್ ಯತೀಶ್ ಕುಮಾರ್ ಆಶಾವಾದದಿಂದ ಹೇಳುತ್ತಾರೆ. ‘ವನ್ಯಜೀವಿಧಾಮ ಆದ ನಂತರ ಕಪ್ಪತ್ತಗುಡ್ಡಕ್ಕೆ ವಿಶೇಷ ಮಹತ್ವ ಬಂದಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಆಗುವ ಹಾನಿ ತಪ್ಪಿಸಲು ಬೆಂಕಿ ರೇಖೆಗಳನ್ನು ನಿರ್ಮಿಸಿ ವಿಶೇಷ ಗಮನ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡಿನಲ್ಲಿರುವ ಬಾಧೆ ಹುಲ್ಲು ಬೆಂಕಿಗೆ ಆಹುತಿ ಆಗುತ್ತದೆ. ಮಳೆಗಾಲದಲ್ಲಿ ಮತ್ತೇ ಹಸಿರು ನಳನಳಿಸುತ್ತದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ವನ್ಯಜೀವಿಗಳು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತವೆ. ಹೀಗಾಗಿ ಬೆಂಕಿ ಆಕಸ್ಮಿಕದಲ್ಲಿ ಜೀವಹಾನಿ ಸಂಭವಿಸುವುದು ವಿರಳ. ವನ್ಯಜೀವಿಧಾಮ ಘೋಷಣೆಯ ನಂತರ ವನ್ಯಜೀವಿಗಳ ರಕ್ಷಣಗೆ ಸರ್ಕಾರದಿಂದ ವಿಶೇಷ ಅನುದಾನ ಸ್ವಲ್ಪ ಮಟ್ಟದಲ್ಲಿ ಸಿಗುತ್ತದೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಇದು ನೆರವಾಗಲಿದೆ’ ಎನ್ನುತ್ತಾರೆ ಡಿಸಿಎಫ್ ದೀಪಿಕಾ ಬಾಜಪೇಯಿ. ‘ಕಪ್ಪತ್ತಗುಡ್ಡ ವನ್ಯಜೀವಿಗಳ ಸಂತತಿ ಪೊರೆಯಲು ಬೇಕಿರುವ ಅತ್ಯುತ್ತಮ ಶಕ್ತಿ ಹೊಂದಿದೆ. ಈಗ ನಡೆದಿರುವ ಪ್ರಾಥಮಿಕ ಅಧ್ಯಯನವು ನಿರಂತರ ಮೇಲ್ವಿಚಾರಣೆ ಮೂಲಕ ಭವಿಷ್ಯದ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸಲು ಆಧಾರವಾಗಲಿದೆ’ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಡಾ. ಸಾಲ್ವಡಾರ್ ಲಿಂಗ್ಡೊಹ್ ಹೇಳಿದ್ದು ಭವಿಷ್ಯದ ಕುರಿತ ಭರವಸೆಯ ಮಾತಿನಂತೆ ಇತ್ತು.