ಸಂಜೆ ಸಮಯಕ್ಕೆ ಚಹಾದ ಜೊತೆ ಬಾಯಿ ಚಪ್ಪರಿಸಿಕೊಂಡು ತಿನ್ನಲು ಕುರುಕಲು ತಿಂಡಿ ಬೇಕೆನಿಸುವುದು ಸುಳ್ಳಲ್ಲ. ಆ ಚಹಾದ ಜೊತೆ ಸವಿಯಲು ಬಗೆಬಗೆಯ ಪಕೋಡಾ ಮಾಡಿಕೊಂಡು ತಿಂದರೆ ಮತ್ತೇಮತ್ತೇ ಬೇಕೆನಿಸುತ್ತದೆ. ವಿವಿಧ ಬಗೆಯ ಪಕೋಡಾ ಮಾಡಿಕೊಟ್ಟರೆ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. ಅವುಗಳ ರೆಸಿಪಿಯನ್ನು ನೀಡಿದ್ದಾರೆ ಪೂರ್ಣಿಮಾ ಗೊಂದೆನಾಯ್ಕರ

ಈರುಳ್ಳಿ-ಆಲೂಗಡ್ಡೆ ಪಕೋಡಾ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಕಾಳು, ಶುಂಠಿ, ಅಚ್ಚಖಾರದ ಪುಡಿ, ಉಪ್ಪು, ಕಡಲೆಬೇಳೆ ಹಿಟ್ಟು, ಆಲೂಗಡ್ಡೆ, ಅಡುಗೆ ಎಣ್ಣೆ.

ಮಾಡುವ ವಿಧಾನ: ಮೊದಲು ಮೂರು ಈರುಳ್ಳಿಯನ್ನು ಉದ್ದಗೆ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಒಂದು ಆಲೂಗಡ್ಡೆ ತುರಿದಿಟ್ಟುಕೊಳ್ಳಬೇಕು. ಹೆಚ್ಚಿಟ್ಟುಕೊಂಡ ಈರುಳ್ಳಿಗೆ ಹೆಚ್ಚಿದ ಹಸಿಮೆಣಸಿನಕಾಯಿ (ನಿಮಗೆ ಬೇಕಾದ ಪ್ರಮಾಣದಲ್ಲಿ), ನುಣ್ಣಗೆ ಮಾಡಿಟ್ಟುಕೊಂಡ ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಎರಡು ಭಾಗವಾಗುವಷ್ಟು ಪುಡಿ ಮಾಡಿಟ್ಟುಕೊಂಡ ಕೊತ್ತಂಬರಿಕಾಳು ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಅಚ್ಚಖಾರದ ಪುಡಿ ಈರುಳ್ಳಿಗೆ ಹಾಕಿ ಮಿಶ್ರಣ ಮಾಡಬೇಕು. ನಂತರ ಎರಡು ಕಪ್ಪಿನಷ್ಟು ಕಡಲೆಹಿಟ್ಟಿನ ಪೌಡರ್ ಹಾಕಬೇಕು. ಎಲ್ಲ ಮಿಶ್ರಣ ಆದನಂತರ ತುರಿದಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿ ಮಿಶ್ರಣ ಮಾಡಬೇಕು. ಬಾಣಲೆಗೆ ಹಾಕಿದ ಎಣ್ಣೆ ಕಾಯ್ದ ನಂತರ ಮಿಶ್ರಣ ಮಾಡಿದ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿ ಕೆಂಪು ವರ್ಣಕ್ಕೆ ಬರುವ ಹಾಗೆ ಕರಿದುಕೊಳ್ಳಬೇಕು. ಇದನ್ನು ಟೊಮೆಟೊ ಸಾಸ್ನೊಂದಿಗೆ ತಿನ್ನಬಹುದು.

ಬ್ರೆಡ್ ಪಕೋಡಾ

ಬೇಕಾಗುವ ಸಾಮಗ್ರಿಗಳು: ಬ್ರೆಡ್ (ನಿಮಗೆ ಬೇಕಾದಷ್ಟು), ಆಲೂಗಡ್ಡೆ, ಜೀರಿಗೆ, ಸಾಸಿವೆ, ಕರಿಬೇವು, ಕೊತ್ತಂಬರಿ, ಈರುಳ್ಳಿ, ಹಸಿಮೆಣಸಿನಕಾಯಿ, ಅಡುಗೆ ಎಣ್ಣೆ, ಉಪ್ಪು, ಚಾಟ್ ಮಸಾಲೆ, ಕಡಲೆಬೇಳೆ ಹಿಟ್ಟು, ಬೆಳ್ಳುಳ್ಳಿ, ಹಸಿಶುಂಠಿ.

ಮಾಡುವ ವಿಧಾನ: ಮೊದಲು ನಮಗೆ ಬೇಕಾಗುವಷ್ಟು ಆಲೂಗಡ್ಡೆಯನ್ನು ಕುಕ್ಕರ್ನಲ್ಲಿ ಮೂರು ವಿಜಲ್ನಲ್ಲಿ ಬೇಯಿಸಿ ಇಟ್ಟುಕೊಳ್ಳಬೇಕು. ಆಲೂಗಡ್ಡೆ ಪಲ್ಯ ಮಾಡುವ ವಿಧಾನದಲ್ಲಿಯೇ, ಕಾದ ಎಣ್ಣೆಗೆ ಜೀರಿಗೆ, ಸಾಸಿವೆ ಹಾಕಿ ಬೇಯಿಸಬೇಕು. ನಂತರ ಬೆಳ್ಳುಳ್ಳಿ, ಹಸಿಶುಂಠಿ ಪೇಸ್ಟ್, ಹೆಚ್ಚಿಟ್ಟುಕೊಂಡ ಈರುಳ್ಳಿ, ಟೊಮೆಟೊ, ಕರಿಬೇವು ಹಾಕಿ ಮಿಶ್ರಣ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಾಟ್ ಮಸಾಲೆ ಹಾಕಿ ಪಲ್ಯ ಮಾಡಿಟ್ಟುಕೊಳ್ಳಬೇಕು.

ಮಾಡಿಟ್ಟುಕೊಂಡ ಪಲ್ಯವನ್ನು ಒಂದು ಬ್ರೆಡ್ನಲ್ಲಿ ಎರಡು ಭಾಗ ಮಾಡಿಕೊಂಡು ನೀರಿನಿಂದ ಮೃದು ಮಾಡಿಕೊಂಡು ಆಲೂಗಡ್ಡೆ ಪಲ್ಯ ಹಾಕಿ ಉಂಡೆ ಆಕಾರದಲ್ಲಿ ಮಾಡಿಟ್ಟುಕೊಳ್ಳಬೇಕು. ನೀರಿನಲ್ಲಿ ತೆಳುವಾಗಿ ಮಿಶ್ರಣಮಾಡಿಟ್ಟು ಕೊಂಡ ಕಡಲೆಹಿಟ್ಟಿನಲ್ಲಿ ಅದ್ದಿ ತೆಗೆದು ಅಡುಗೆ ಎಣ್ಣೆಯಲ್ಲಿ ಹಾಕಿ ಕರಿಯಬೇಕು

ಸೊಪ್ಪಿನ ಗರಿಗರಿ ಪಕೋಡಾ

ಬೇಕಾಗುವ ಸಾಮಗ್ರಿಗಳು: ಮೆಂತ್ಯೆಸೊಪ್ಪು (ಒಂದು ಕಪ್), ಪಾಲಕ್ (ಎರಡು ಕಪ್), ಸಬ್ಬಸಗಿ (ಒಂದು ಕಪ್), ಕೊತ್ತಂಬರಿ ಸೊಪ್ಪು (ಅರ್ಧ ಕಪ್ಪ), ಈರುಳ್ಳಿ ಸೊಪ್ಪು (ಅರ್ಧ ಕಪ್), ಹಸಿಮೆಣಸಿನಕಾಯಿ, ಈರುಳ್ಳಿ, ಜೀರಿಗೆ, ಕೊತ್ತಂಬರಿ ಕಾಳು ಪುಡಿ, ಅಚ್ಚ ಖಾರದ ಪುಡಿ, ಚಾಟ್ ಮಸಾಲೆ, ಉಪ್ಪು, ಗೋಡಂಬಿ, ಅಡುಗೆ ಎಣ್ಣೆ, ಕಡಲೆ ಹಿಟ್ಟು.

ಮಾಡುವ ವಿಧಾನ: ಒಂದು ಬಾಣಲೆಗೆ ಸಣ್ಣಗೆ ಹೆಚ್ಚಿಟ್ಟುಕೊಂಡ ಎರಡು ಕಪ್ಪ ಪಾಲಕ್, ಒಂದು ಕಪ್ ಮೆಂತ್ಯೆಸೊಪ್ಪು, ಒಂದು ಕಪ್ ಸಬ್ಬಸಗಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಹೆಚ್ಚಿಟ್ಟುಕೊಂಡ ಎರಡು ಹಸಿಮೆಣಸಿನಕಾಯಿ, ಹೆಚ್ಚಿದ ಒಂದು ಈರುಳ್ಳಿ, ಅರ್ಧ ಚಮಚ ಕೊತ್ತಂಬರಿ ಕಾಳು ಪೌಡರ್, ಒಂದು ಚಮಚ ಅಚ್ಚ ಖಾರದ ಪೌಡರ್, ಅರ್ಧ ಚಮಚ ಚಾಟ್ ಮಸಾಲೆ, ರುಚಿಗೆ ತಕ್ಕಟ್ಟು ಉಪ್ಪು, ನಾಲ್ಕು ಗೋಡಂಬಿ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಮೂರು ಚಮಚ ಕಡಲೆ ಹಿಟ್ಟು ಹಾಕಿ ನೀರು ಹಾಕಿ ಬಜ್ಜಿ ಹದಕ್ಕೆ ಬರುವಂತೆ ಮಿಶ್ರಣ ಮಾಡಬೇಕು. ಬಾಣಲೆಯಲ್ಲಿ ಕಾದ ಎಣ್ಣೆಗೆ ಮಾಡಿಟ್ಟುಕೊಂಡ ಮಿಶ್ರಣವನ್ನು ಹಾಕಿ ಕರಿದುಕೊಳ್ಳಬೇಕು.

ಶುಂಠಿ ಟೀ

ಬೇಕಾಗುವ ಸಾಮಗ್ರಿಗಳು: ಹಸಿಶುಂಠಿ, ಚಕ್ಕೆ, ಎಲಕ್ಕಿ, ಬೆಲ್ಲ, ಹಾಲು, ಟೀ ಪೌಡರ್.

ಮಾಡುವ ವಿಧಾನ: ಮೊದಲು ಒಂದು ಬಾಣಲೆಯಲ್ಲಿ ಎರಡು ಗ್ಲಾಸ್ ನೀರು ಹಾಕಿ ಕಾಯಲು ಇಡಬೇಕು. ಅದಕ್ಕೆ ಸಣ್ಣಗೆ ಪೇಸ್ಟ್ ಮಾಡಿಟ್ಟುಕೊಂಡ ಶುಂಠಿ, ಎರಡು ತುಂಡು ಚಕ್ಕೆ, ಎರಡು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಟೀ ಪೌಡರ್ ಹಾಕಿ ಎರಡು ನಿಮಿಷ ಕುದಿಸಬೇಕು. ನಂತರ ಇದಕ್ಕೆ ಒಂದು ಗ್ಲಾಸ್ನಷ್ಟು ಹಾಲು ಹಾಕಿ, ನಂತರ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಶ್ರಣ ಮಾಡಬೇಕು. ನಂತರ ಒಂದು ಕುದಿ ಕುದಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.