ಪೋರ್ಕ್ ದೊನ್ನೆ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಕೆಂಪು ಮಾಂಸ ಮಾತ್ರ), ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿಸೊಪ್ಪು 1 ಕಪ್, ಪುದೀನಾ 1 ಕಪ್, ಹಸಿಮೆಣಸಿನಕಾಯಿ 8, ಬಿರಿಯಾನಿ ಮಸಾಲೆ 1 ಚಮಚ, ಗರಂಮಸಾಲೆ 1 ಚಮಚ, ಜೀರಿಗೆ ಪುಡಿ 1/2 ಚಮಚ, ಪೆಪ್ಪರ್ ಪುಡಿ 1/2 ಚಮಚ, ಲವಂಗ 6, ಏಲಕ್ಕಿ 2, ಕಾಳು ಮೆಣಸು 8, ಚಕ್ಕೆ 3 ತುಂಡು, ಸೋಂಪು ಕಾಳು ಸ್ವಲ್ಪ, ಮೊರಾಠಿ ಮೊಗ್ಗು 2, ಅನಾನಸ್ ಹೂ 2, ಪಲಾವ್ ಎಲೆ 3, ಪತ್ರೆ 2 ಎಸಳು, ಕಸೂರಿ ಮೇಥಿ 4 ಚಮಚ, ಈರುಳ್ಳಿ 4, ಟೊಮ್ಯಾಟೊ 6, ಅರಿಶಿನ ಪುಡಿ ಸ್ವಲ್ಪ, ಎಣ್ಣೆ, ತುಪ್ಪ, ಉಪ್ಪು.

ತಯಾರಿಸುವ ವಿಧಾನ: ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಪುದೀನಾಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಕುಕ್ಕರ್ಗೆ ಎಣ್ಣೆ ಸೋಂಪುಕಾಳು, ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಮೊರಾಠಿ ಮೊಗ್ಗು, ಪಲಾವ್ ಎಲೆ, ಈರುಳ್ಳಿ ಹಾಕಿ ಫ್ರೈ ಆದ ನಂತರ ರುಬ್ಬಿದ ಮಿಶ್ರಣ, ಅರಿಶಿನಪುಡಿ, ಉಪ್ಪು ಹಾಕಿ ಹಸಿವಾಸನೆ ಹೋಗುವ ತನಕ ಬೇಯಿಸಿ ನಂತರ ಟೊಮೊಟೊ, ಪೋರ್ಕ್, ಬಿರಿಯಾನಿ ಮಸಾಲೆ, ಗರಂಮಸಾಲೆ, ಜೀರಿಗೆಪುಡಿ, ಪೆಪ್ಪರ್ಪುಡಿ ಹಾಕಿ ಸ್ವಲ್ಪ ಫ್ರೆöÊ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಹಾಕಿಸಿ ಸ್ವಲ್ಪ ಸಮಯ ಬಿಟ್ಟು ಕುಕ್ಕರ್ ಮುಚ್ಚಳ ತೆಗೆದು ತೊಳೆದ ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ಒಂದು ಲೋಟ ಅಕ್ಕಿಗೆ ಒಂದೂವರೆವಷ್ಟು ನೀರು, ಕಸೂರಿಮೇಥಿ, ತುಪ್ಪ ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ.

ಪೋರ್ಕ್ ಡ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಮಾಂಸ ಮತ್ತು ಚರ್ಬಿ) ಶುಂಠಿ ಪೇಸ್ಟ್ 1 ಚಮಚ ಬೆಳ್ಳುಳ್ಳಿ 1 ಉಂಡೆ ಖಾರದ ಪುಡಿ 2 ಚಮಚ ಧನಿಯಾ ಪುಡಿ 2 ಚಮಚ ಪೋರ್ಕ್ ಮಸಾಲೆ 1 ಚಮಚ ಅರಿಶಿನ ಪುಡಿ ಸ್ವಲ್ಪ ಈರುಳ್ಳಿ 2 ಕರಿಬೇವು 2 ಕಡ್ಡಿ ಕೊತ್ತಂಬರಿಸೊಪ್ಪು ಸ್ವಲ್ಪ ಪುದೀನಾ ಸ್ವಲ್ಪ ಹುಣುಸೇಹುಳಿ 1 ಟೀ ಕಪ್ ಉಪ್ಪು. ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್ಗೆ ಅರಿಶಿನ ಪುಡಿ ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ನೀರು ಹಾಕದೆ ಕುಕ್ಕರ್ನಲ್ಲಿ 3 ವಿಷಲ್ ಹಾಕಿಸಿಟ್ಟುಕೊಳ್ಳಿ.ಫ್ನೈಗೆ ಬೆಂದ ಪೋರ್ಕ್ ಅನ್ನು ಹಾಕಿ ಅದಕ್ಕೆ ಹುಣಸೇಹುಳಿ ಖಾರದಪುಡಿ ಅರಿಶಿನಪುಡಿ ಮತ್ತು ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೆöÊ ಮಾಡಿದ ನಂತರ ಈರುಳ್ಳಿ ಜಜ್ಜಿದ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಕರಿಬೇವು ಹಾಕಿ ಫ್ರೈ ಮಾಡಿ. ಸ್ವಲ್ಪ ಸಮಯದ ನಂತರ ಧನಿಯಾಪುಡಿ ಪೋರ್ಕ್ ಮಸಾಲೆ ಹಾಕಿ ಫ್ರೆöÊ ಮಾಡುತ್ತೀರಿ ಮಾಂಸ ಬೆಂದಿಲ್ಲವೆAದರೆ ಮಾಂಸ ಬೆಂದಿರುವ ನೀರನ್ನು ಹಾಕಿಕೊಳ್ಳಿ ಚೆನ್ನಾಗಿ ಡ್ರೆöÊ ಆದ ನಂತರ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಉದುರಿಸಿ.

ಹಂದಿಮಾಂಸದ ಸಾರು

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1 ಕೆ.ಜಿ ಶುಂಠಿ 2 ಇಂಚು ಬೆಳ್ಳುಳ್ಳಿ 3 ಉಂಡೆ ಕೊತ್ತಂಬರಿಸೊಪ್ಪು ಸ್ವಲ್ಪ ಪುದೀನ ಸೊಪ್ಪು ಸ್ವಲ್ಪ ದನಿಯಾ ಪುಡಿ 3 ಚಮಚ ಖಾರದ ಪುಡಿ 3 ಚಮಚ ಅರಿಶಿನ ಪುಡಿ ಸ್ವಲ್ಪ ಚಕ್ಕೆ 2 ಇಂಚು ಉದ್ದದ್ದು ಲವಂಗ 5 ಮೆಣಸು 10 ಪತ್ರೆ ಸ್ವಲ್ಪ ಜಾಯಿಕಾಯಿ ಸ್ವಲ್ಪ ಹುರಿಗಡಲೆ 1 ಚಮಚ ಗಸೆಗಸೆ ಸ್ವಲ್ಪ ಈರುಳ್ಳಿ 3 ಟೊಮ್ಯಾಟೊ 4 ಕಾಯಿ ಅರ್ಧ ಹೋಳು ಉಪ್ಪು. ತಯಾರಿಸುವ ವಿಧಾನ: ಈರುಳ್ಳಿ ಖಾರಕ್ಕೆ: ಈರುಳ್ಳಿ ಕೊತ್ತಂಬರಿ ಪುದೀನ ಅರಿಶಿನ ಪುಡಿ ಶುಂಠಿ ಬೆಳ್ಳುಳ್ಳಿ ಹಾಕಿ ರುಬ್ಬಿಟ್ಟುಕೊಳ್ಳಿ.ಮಸಾಲೆಗೆ: ಟೊಮೆಟೊ ಧನಿಯಾಪುಡಿ ಖಾರದ ಪುಡಿ ಕಾಯಿ ಚಕ್ಕೆ ಲವಂಗ ಪತ್ರೆ ಜಾಯಿಕಾಯಿ ಹುರಿಗಡಲೆ ಗಸೆಗಸೆ ಹಾಕಿ ರುಬ್ಬಿಟ್ಟುಕೊಳ್ಳಿ.ಕುಕ್ಕರ್ಗೆ ಚೆನ್ನಾಗಿ ತೊಳೆದ ಪೋರ್ಕ್ ಮತ್ತು ಉಪ್ಪನ್ನು ಹಾಕಿ ಮಾಂಸಕ್ಕೆ ಉಪ್ಪು ಹಿಡಿಯುವ ತನಕ ಫ್ರೈ ಮಾಡಿದ ನಂತರ ಈರುಳ್ಳಿ ಖಾರ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಹಾಕಿಸಿ ಸ್ವಲ್ಪ ಸಮಯ ಬಿಟ್ಟು ಕುಕ್ಕರ್ ಮುಚ್ಚಳ ತೆಗೆದು ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ.

ಪೋರ್ಕ್ ಫ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಮಾಂಸ ಮತ್ತು ಚರ್ಬಿ) ಬೆಳ್ಳುಳ್ಳಿ 1 ಉಂಡೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ ಪುದೀನ ಸೊಪ್ಪು ಸ್ವಲ್ಪ ಕರಿಬೇವು 1 ಕಡ್ಡಿ ಖಾರದ ಪುಡಿ 1 ಚಮಚ ಧನಿಯಾ ಬೀಜ 1 ಚಮಚ ಜಾಯಿಕಾಯಿ ಸ್ವಲ್ಪ ಅರಿಶಿನ ಪುಡಿ ಸ್ವಲ್ಪ ಪೋರ್ಕ್ ಮಸಾಲೆ 1 ಚಮಚ ಪೆಪ್ಪರ್ 1/2 ಚಮಚ ಏಲಕ್ಕಿ 1 ಲವಂಗ 10 ಚಕ್ಕೆ 3 ತುಂಡು ಈರುಳ್ಳಿ 2 ಟೊಮ್ಯಾಟೊ 1 ಬ್ಯಾಡಗಿ ಮೆಣಸಿನಕಾಯಿ 6 ಹಸಿ ಮೆಣಸಿನಕಾಯಿ 6 ಎಣ್ಣೆ ಸಾಸಿವೆ ಉಪ್ಪು. ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್ಗೆ ಅರಿಶಿನ ಪುಡಿ ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಬಾಣಲಿಗೆ ಧನಿಯಾ ಬೀಜ ಲವಂಗ ಜಾಯಿಕಾಯಿ ಪೆಪ್ಪರ್ ಬ್ಯಾಡಗಿ ಮೆಣಸಿನಕಾಯಿ ಏಲಕ್ಕಿ ಚಕ್ಕೆಯನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು ಆರಿದ ನಂತರ ಪುಡಿಮಾಡಿಟ್ಟುಕೊಳ್ಳಿ. ಫ್ರೈಗೆ ಪ್ಯಾನ್ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಕರಿಬೇವು ಹಸಿಮೆಣಸಿನಕಾಯಿ ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈಗೆ ಮಾಡಿದ ಮೇಲೆ ಬೆಂದ ಮಾಂಸ ನೀರಿನ ಸಮೇತ ಹಾಕಿದ ನಂತರ ಈರುಳ್ಳಿ ಟೊಮ್ಯಾಟೊ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಪೋರ್ಕ್ ಮಸಾಲೆ ಮತ್ತು ಪುಡಿ ಮಾಡಿದ ಮಸಾಲೆ ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ ಕೊನೆಗೆ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನ ಉದುರಿಸಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.