ನವದೆಹಲಿ: ರಷ್ಯಾ–ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಡಾ ಇಗೊರ್ ಪೊಲಿಖಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ:Russia–Ukraine Conflict: ಉಕ್ರೇನ್ ಬೆನ್ನಿಗೆ ನಿಂತ ಯುರೋಪಿಯನ್ ಕಮಿಷನ್

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಬೇಕು ಎಂದೂ ಅವರು ಕೋರಿದ್ದಾರೆ.

'ಈ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಬಲ್ಲವರು ಎಂದು ನಾನು ಭಾವಿಸುತ್ತೇನೆ. ಅವರು ನಮ್ಮ ಅಧ್ಯಕ್ಷರೊಂದಿಗೂ ಮಾತನಾಡಬಹುದು. ಇತಿಹಾಸದಲ್ಲಿ ಹಲವು ಬಾರಿ ಭಾರತ ಶಾಂತಿಪಾಲನಾ ಪಾತ್ರ ನಿರ್ವಹಿಸಿದೆ. ಈ ಯುದ್ಧವನ್ನು ನಿಲ್ಲಿಸಲು ನಿಮ್ಮ ಬಲವಾದ ಬೆಂಬಲವನ್ನು ನಾವು ಕೋರುತ್ತೇವೆ,’ ಎಂದು ಡಾ ಇಗೊರ್ ಪೋಲಿಖಾ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ:Explainer| ಏನಿದು ಉಕ್ರೇನ್-ರಷ್ಯಾ ಸಂಘರ್ಷ? ಭಾರತಕ್ಕೆ ಯಾಕೆ ಕಳವಳ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.