ಬೆಂಗಳೂರು: ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ಪಠ್ಯಕ್ರಮದ ಜತೆಗೆ ಭಗವದ್ಗೀತೆಯನ್ನು ಬೋಧಿಸುವ ಕುರಿತು ಆದೇಶ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಸರ್ಕಾರ ಆದೇಶ ಹೊರಡಿಸಿದ್ದೇ ಆದರೆ, ಎಲ್ಲಾ ಶಾಲೆಗಳ ಪಠ್ಯಕ್ರಮದಲ್ಲಿ ನೀತಿ ಬೋಧನೆಯ ಪಾಠಗಳನ್ನು ಅಳವಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಓದಿ...ರಷ್ಯಾ ರಾಕೆಟ್ ದಾಳಿ: ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವು

ಈ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪಠ್ಯ ಪುಸ್ತಕಗಳ ಸಮಿತಿ ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಈ ಪ್ರಸ್ತಾವನೆ ಆರಂಭಿಕ ಹಂತದಲ್ಲಿದ್ದು, 2022- 23ನೇ ಶೈಕ್ಷಣಿಕ ವರ್ಷದಲ್ಲಿ ಪರಿಚಯಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

‘ಗುಜರಾತ್‌ನಲ್ಲಿ 2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6ರಿಂದ 12ನೇ ತರಗತಿಗಳಲ್ಲಿ ಭಗವದ್ಗೀತೆಯನ್ನು ಪಠ್ಯಕ್ರಮದ ಭಾಗವಾಗಿ ಬೋಧಿಸಲಾಗುವುದು’ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ.

ಓದಿ... ಗುಜರಾತ್‌ನಲ್ಲಿ6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.