ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ಊಟ ಮಾಡಲು ಹೋಗುವ ಹೋಟೆಲ್, ರೆಸ್ಟೋರೆಂಟ್.. ಹೀಗೆ ಕಟ್ಟಡಗಳು ಆಪ್ತತೆ ಒದಗಿಸಬೇಕೆಂದರೆ ಅಲ್ಲಿ ಒಳಾಂಗಣ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.

ಹೆಚ್ಚಿನವರು ತಮ್ಮ ಮನೆ ಸುವ್ಯವಸ್ಥಿತ, ಸುರಕ್ಷಿತ, ಗಾಳಿ–ಬೆಳಕು ಆಡುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯ ನೀಡುತ್ತಾರೆ. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆಯ ಒಳ–ಹೊರ ವಾತಾವರಣ ಸುಂದರವಾಗಿದ್ದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.

ಉತ್ತಮವಾಗಿ ವಿನ್ಯಾಸ ಮಾಡಿದ ಕಟ್ಟಡಗಳಿಂದಾಗಿ ಮನೆಗೆ ಕ್ರಿಯಾತ್ಮಕತೆ ಮೂಡುತ್ತದೆ. ಇಲ್ಲಿ ಕಡಿಮೆ ಜಾಗವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯ. ಮನೆ, ಸೂಪರ್ ಮಾರ್ಕೆಟ್, ಕಚೇರಿ, ಮಾಲ್, ಕಂಪನಿ, ಕಾಫಿ ಶಾಪ್, ರೆಸ್ಟೋರೆಂಟ್... ಹೀಗೆ ಯಾವುದೇ ಕಟ್ಟಡವಿರಲಿ, ಅಲ್ಲಿ ಒಳಾಂಗಣ ವಿನ್ಯಾಸ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲಿ ಬಳಸುವ ಬಣ್ಣ, ಸಾಮಗ್ರಿ, ಪೀಠೋಪಕರಣ, ನೆಲಹಾಸು, ಲೈಟಿಂಗ್‌ಗಳಿಂದ ಹಿಡಿದು ಗೋಡೆಯ ಮೇಲೆ ಹಾಕುವ ಪೇಂಟಿಂಗ್ ಸಹ ಮಹತ್ವದ್ದಾಗಿ ಪರಿಗಣಿತವಾಗುತ್ತಿದೆ.

‘ಒಳಾಂಗಣ ವಿನ್ಯಾಸ’ದ ಪರಿಧಿ ಪಟ್ಟಣ–ನಗರಗಳೆನ್ನದೇ ಎಲ್ಲೆಡೆಗೂ ವಿಸ್ತರಿಸಿದೆ. ಕಾರಣ ಜನರ ಜೀವನ ಶೈಲಿ ಬದಲಾಗಿರುವುದು. ಕಲಾಪ್ರೇಮಿ ಜನರು ತಾವು ಇರುವ ಮನೆಯೂ ಕಲಾತ್ಮಕವಾಗಿರಲಿ ಎಂದು ಬಯಸುತ್ತಿ ದ್ದಾರೆ. ಸಾಮಾಜಿಕ ಜಾಲತಾಣ ಎನ್ನುವುದು ಎಲ್ಲವೂ ಎಲ್ಲರಿಗೂ ಎಟಕುವಂತೆ ಮಾಡಿರುವುದರಿಂದ ಒಳಾಂಗಣ ವಿನ್ಯಾಸದ ಕಲ್ಪನೆ ಈಗ ಸಾಮಾನ್ಯ ಜನರಲ್ಲೂ ಮೂಡಿದೆ. ಸಾಮಾಜಿಕ ಜಾಲತಾಣಗಳು,ಸ್ಮಾರ್ಟ್ ಹೌಸ್ ಕಲ್ಪನೆಗಳು ದೇಶದಲ್ಲಿ ಮನೆ ನಿರ್ಮಾಣದ ಆಲೋಚನೆಗಳನ್ನು ಬದಲಾಯಿಸಿವೆ. ಹೀಗಾಗಿ ಒಳಾಂಗಣ ವಿನ್ಯಾಸದ ಬೇಡಿಕೆಯೂ ವಿಸ್ತರಿಸಲಿದೆ.

ಕಲೆ ಹಾಗೂ ವಿಜ್ಞಾನ ಎರಡೂ ಸೇರಿದ ಕ್ಷೇತ್ರವಾಗಿರುವ ಒಳಾಂಗಣ ವಿನ್ಯಾಸವು ಜೀವನದ ಪದ್ಧತಿಯನ್ನು ಸುಧಾರಿಸುವುದಲ್ಲದೇ ಕ್ರಿಯಾತ್ಮಕತೆ ಉಂಟುಮಾಡುತ್ತದೆ ಎನ್ನುವುದು ತಜ್ಞರ ಅಭಿಮತ.

ಸುರಕ್ಷತೆಯ ದೃಷ್ಟಿಯಿಂದಲೂ ಒಳಾಂಗಣ ವಿನ್ಯಾಸ ಮಹತ್ವ ಪಡೆದಿದೆ. ಒಂಟಿಯಾಗಿ ಬದುಕುವ ಮಹಿಳೆಯರು, ಒಂಟಿ ವೃದ್ಧರು ಇರುವ ಮನೆಗಳಿಗೆ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸ ಮಾಡಲಾಗುತ್ತದೆ. ವೃದ್ಧರಿಗೆ ಸುಲಭವಾಗಿ ಓಡಾಡಲು ಅನುಕೂಲವಾಗುವ ನೆಲಹಾಸು, ಅಡುಗೆ ಮಾಡಿಕೊಳ್ಳಲು ಸೂಕ್ತ ಸಾಮಗ್ರಿಗಳನ್ನು ಒಳಾಂಗಣ ವಿನ್ಯಾಸಗಾರರು ಗುರುತಿಸುತ್ತಾರೆ. ಹೆಚ್ಚು ತಂತ್ರಜ್ಞಾನ ಸ್ನೇಹಿ ವಿನ್ಯಾಸಗಳನ್ನು ಮನೆಗಳಲ್ಲಿ ಅಳವಡಿಸಿದರೆ ನಿತ್ಯದ ಕೆಲಸಗಳನ್ನೂ ಸುಲಭವಾಗಿ ಇವರು ಮಾಡಿಕೊಳ್ಳಬಹುದು.

ಗೋಡೆಚಿತ್ರಗಳು, ಪೀಠೋಪಕರಣ, ವಿನ್ಯಾಸಭರಿತ ನೆಲಹಾಸು, ತೂಗು ದೀಪಗಳು, ಪ್ರದರ್ಶನ ಸಾಮಗ್ರಿಗಳು, ಗಾಳಿ–ಬೆಳಕು ಬರಲು ಅನುಕೂಲವಾಗುವ ಕಿಟಕಿಗಳು... ಹೀಗೆ ನೂರಾರು ವಿನ್ಯಾಸಗಳನ್ನು ಪರಿಶೀಲಿಸಲು ತಂತ್ರಜ್ಞಾನವು ಈ ಕ್ಷೇತ್ರಕ್ಕೆ ವರವಾಗಿದೆ. ಮನೆಯ ಒಳ–ಹೊರಗೆ ಅಂತಿಮ ರೂಪ ಹೇಗೆ ಇರಲಿದೆ ಎಂಬುದನ್ನು ಗ್ರಾಹಕರು ನಿಖರವಾಗಿ ನೋಡಲು ಇದರಲ್ಲಿ ಸಾಧ್ಯ.

ಮನೆ ಕಟ್ಟಿಸುವಾಗ ಹಲವರಿಗೆ ಹೀಗೆಯೇ ಇರಬೇಕೆ ಎಂಬ ಪರಿಕಲ್ಪನೆ ಮನಸ್ಸಿನಲ್ಲಿ ಮೊದಲೇ ಇರುತ್ತದೆ. ಇನ್ನಷ್ಟು ಮಂದಿಗೆ ಮನೆ ಚೆನ್ನಾಗಿ ಕಾಣಬೇಕು. ಆದರೆ, ಹೇಗೆ ಮಾಡಿಸುವುದು ಎಂಬ ಸ್ಪಷ್ಟ ಚಿತ್ರಣ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಒಳಾಂಗಣ ವಿನ್ಯಾಸಗಾರರ ಸಹಾಯ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.