ಜಗಮಗಿಸುವ ದೀಪಗಳಿಂದ ಅಲಂಕರಿಸಲಾಗಿದ್ದ ದೋಣಿಗಳು ಒಂದರ ಹಿಂದೊಂದು ಹಾವಿನ ರೀತಿ ಸಾಗುವ ಮನಮೋಹಕ ದೃಶ್ಯವು ಸೋಮವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಓಡಾಡುತ್ತಿದೆ. ‘ಇದು ಹೈದರಾಬಾದ್‌ನ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ವೈಭವ’ ಎಂಬುದಾಗಿ ಕೆಲವರು ಟ್ವೀಟ್ ಮಾಡಿದ್ದಾರೆ. ಆದರೆ ಇದು ಕೇರಳದ ದೀಪೋತ್ಸವದ ದೃಶ್ಯ ಎಂದು ಭಾವನಾ ಸೋಮಯ್ಯ ಎಂಬುವರು ಟ್ವೀಟ್ ಮಾಡಿದ್ದಾರೆ. ‘ಕೇರಳದಲ್ಲಿ ದೀಪಾವಳಿ ಮುಂದುವರಿದಿದ್ದು,ದೀಪಾಲಂಕೃತ 240 ದೋಣಿಗಳು ನದಿತೀರದಲ್ಲಿ ಸಾಗಿದವು’ ಎಂದು ಅವರು ವಿವರಣೆ ನೀಡಿದ್ದಾರೆ. ಆದರೆ ಇವೆಲ್ಲವೂ ತಪ್ಪು ಮಾಹಿತಿ.

ಈ ಸುಂದರ ದೃಶ್ಯವು ಹೈದರಾಬಾದ್‌ನದ್ದೂ ಅಲ್ಲ, ಕೇರಳದ್ದೂ ಅಲ್ಲ. ಅಸಲಿಗೆ ಭಾರತದ್ದೇ ಅಲ್ಲ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಚೀನಾದ ಗುವಾಂಗ್‌ಕ್ಷಿ ಪ್ರಾಂತ್ಯದಲ್ಲಿ ಮೇ 19ರಂದು ನಡೆದ ‘ಗೋಲ್ಡನ್ ಡ್ರ್ಯಾಗನ್’ ಕಾರ್ಯಕ್ರಮದಲ್ಲಿ ಚಿನ್ನದ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದ್ದ 80 ದೋಣಿಗಳು ಯುಲಾಂಗ್ ನದಿಯಲ್ಲಿ ಸಾಗಿದ್ದವು. ಚೀನಾ ಪ್ರವಾಸೋದ್ಯಮ ದಿನದ ಅಂಗವಾಗಿ 70 ಮೀಟರ್ ಉದ್ದದ ದೋಣಿ ಸರಣಿಯನ್ನು ರಚಿಸಿ, ಪ್ರವಾಸಿಗರನ್ನು ಸೆಳೆಯಲು ಯತ್ನಿಸಲಾಗಿತ್ತು ಎಂದು ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.