ನವದೆಹಲಿ: ಲೋಕಸಭೆಯಿಂದ ಅಮಾನತುಗೊಂಡಿರುವ ಸಂಸದರು ಮಂಗಳವಾರ ಕೇಳಬೇಕಾಗಿದ್ದ 27 ಪ್ರಶ್ನೆಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಜತೆಗೆ ಒಂದೇ ಪ್ರಶ್ನೆಯನ್ನು ವಿವಿಧ ಸಚಿವರಿಗೆ ಕೇಳಬಯಸಿದ್ದ ಸದಸ್ಯರ ಗುಂಪಿನಿಂದ ಅಮಾನತುಗೊಂಡ ಸಂಸದರ ಹೆಸರನ್ನು ಕೈಬಿಡಲಾಗಿದೆ.
.92 ಸಂಸದರ ಅಮಾನತು: ಗಾಂಧಿ ಪ್ರತಿಮೆ ಎದುರು ‘ಇಂಡಿಯಾ’ ಪ್ರತಿಭಟನೆ.
ಇತ್ತೀಚೆಗೆ ನಡೆದ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಹನುಮಾನ್ ಬೆನಿವಾಲ್ ಅವರ ಹೆಸರನ್ನೂ ಅಳಿಸಿಹಾಕಲಾಗಿದೆ.

ತೆಗೆದುಹಾಕಲಾದ 27 ಪ್ರಶ್ನೆಗಳ ಪೈಕಿ, ಟಿಎಂಸಿಯ ಅಪರುಪ ಪೊದ್ದಾರ್ ಹಾಗೂ ಕಾಂಗ್ರೆಸ್ನ ರಮ್ಯಾ ಹರಿದಾಸ್ ಅವರು ಕೇಳಿದ್ದ 2 ಚುಕ್ಕಿ ಗುರುತಿನ ಪ್ರಶ್ನೆಗಳೂ ಸೇರಿವೆ. ಉಳಿದ 25 ಚುಕ್ಕಿ ಗುರುತು ಇಲ್ಲದವು.
.ಲೋಕಸಭೆ ಸಂಸದರ ವಿರುದ್ಧದ ಕ್ರಮದ ಬೆನ್ನಲ್ಲೇ ರಾಜ್ಯಸಭೆಯ 45 ಸದಸ್ಯರ ಅಮಾನತು.
ಸಂಸತ್ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿ, ಭಿತ್ತಿಪತ್ರ ಹಿಡಿದುಕೊಂಡು ಘೋಷಣೆ ಕೂಗಿದ್ದರಿಂದ 46 ಸಂಸದರನ್ನು ಸೋಮವಾರ ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.
.News Express | ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಗೆ ಪಟ್ಟು: 92 ಸಂಸದರ ಅಮಾನತು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.