ನವದೆಹಲಿ: ಭಾರತದಲ್ಲಿ ಕೆಟ್ಟ ವಿಷಯಗಳಿಗಿಂತ 40 ಪಟ್ಟು ಹೆಚ್ಚು ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಪಢಣವೀಸ್ ಅವರ ಸಮ್ಮುಖದಲ್ಲಿ ಉತ್ತರ ಮುಂಬೈನ ಉಪನಗರದಲ್ಲಿ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

‘ಹಲವು ಬಾರಿ ನಕಾರಾತ್ಮಕ ಚರ್ಚೆಗಳು ಕೇಳಿ ಬರುತ್ತವೆ. ಆದರೆ, ನಾವು ದೇಶದಾದ್ಯಂತ ಹೋಗಿ ನೋಡಿದಾಗ, ಭಾರತದಲ್ಲಿ ನಡೆಯುತ್ತಿರುವ ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವುದಕ್ಕಿಂತ 40 ಪಟ್ಟು ಹೆಚ್ಚು ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂದು ನಮಗೆ ತಿಳಿಯುತ್ತದೆ’ ಎಂದು ಭಾಗವತ್ ಹೇಳಿದ್ದಾರೆ.

ಒಳ್ಳೆಯದು ಅಥವಾ ಕೆಟ್ಟದ್ದನ್ನು ನಿರ್ಧರಿಸುವ ಮಾನದಂಡ ಯಾವುದು?, ಗೋಚರಿಸುವಂತಹದ್ದು ಇದೆ ಮತ್ತು ನಿಜವಾಗಿ ಸಂಭವಿಸುವ ಇನ್ನೊಂದು ವಿಷಯವಿದೆ. ಮಾಡದಿದ್ದರೂ ಮಾಡಿದಂತೆಯೇ ಗೋಚರಿಸಬಹುದು ಎಂದು ಭಾಗವತ್ ಮಾರ್ಮಿಕವಾಗಿ ನುಡಿದಿದ್ದಾರೆ.

ಭಾರತವು ಕೀರ್ತಿ ಪಡೆಯುವುದನ್ನು ನೋಡುವ ಜನರ ಬಯಕೆ ಇಂದು ಮತ್ತಷ್ಟು ಪ್ರಬಲವಾಗಿದೆ. ನಾವು ಪ್ರಗತಿ ಹೊಂದುತ್ತಿದ್ದೇವೆ. ಆದರೆ, ನಾವು ಇನ್ನೂ ಶಕ್ತಿಶಾಲಿಯಾಗಿಲ್ಲ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.

ಇಂದು ಕೇವಲ ರೋಟಿ ಕಪ್‌ಡಾ ಔರ್ ಮಕಾನ್ (ಆಹಾರ, ವಸತಿ ಮತ್ತು ಬಟ್ಟೆ) ಇದ್ದರೆ ಸಾಕಾಗುವುದಿಲ್ಲ. ಬದಲಾಗಿ ಇಂದಿನ ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕೂಡ ಅತ್ಯಗತ್ಯವಾಗಿದೆ ಎಂದು ಭಾಗವತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.