ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

3ನೇ ಹಂತ‌ದ ಮತದಾನ: ಅಸ್ಸಾಂ ಗರಿಷ್ಠ, ಕಾಶ್ಮೀರ ಕನಿಷ್ಠ, ರಾಜ್ಯದಲ್ಲಿ 67%

Published : 23 ಏಪ್ರಿಲ್ 2019, 13:59 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕವೂ ಸೇರಿದಂತೆ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ 116 ಕ್ಷೇತ್ರಗಳಿಗೆ ಇಂದು ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಒಟ್ಟಾರೆ ದೇಶಾದ್ಯಂತ ಶೇ. 65.49 ರಷ್ಟು ಮತದಾನ ನಡೆದಿದೆ.

ಮೂರನೇ ಹಂತದ ಮತದಾನದಲ್ಲಿ ಅಸ್ಸಾಂನಲ್ಲಿ ಶೇ. 81 ರಷ್ಟು ಮತದಾನವಾಗಿದ್ದರೆ, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕೇವಲ 12.86 ರಷ್ಟು ಮಂದಿ ಮತ ಚಲಾವಣೆ ಮಾಡಿದ್ದಾರೆ.

14 ಕ್ಷೇತ್ರಗಳಿಗೆ ಮತದಾನ ಕಂಡ ಕರ್ನಾಟಕದಲ್ಲಿ ಶೇ. 67.29ರಷ್ಟು ಮತದಾನವಾಗಿದೆ.

ಕರ್ನಾಟಕದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದ್ದರೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರೊಬ್ಬರು ಈ ಘರ್ಷಣೆಯಲ್ಲಿ ಪ್ರಾಣತೆತ್ತಿದ್ದಾರೆ.

ಕೇರಳದಲ್ಲಿ ಮತದಾನದ ವೇಳೆಯೇ ಮೂರು ಮಂದಿ ಅಸುನೀಗಿದ್ದಾರೆ. ಇನ್ನೊಂದೆಡೆ, ಒಡಿಶಾಸ ದೆಂಕನಾಲ್‌ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿ ಮೃತಪಟ್ಟಿದ್ದಾರೆ.ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಎನ್‌ಸಿಪಿ ಕಾರ್ಯಕರ್ತರನನ್ನು ಹಿಡಿದು ತಳಿಸಿದ್ದಾರೆ.

ಗುಜರಾತ್‌ನ ಗಿರ್‌ ಅರಣ್ಯದಲ್ಲಿ ಶೇ.100 ಮತದಾನ

ಗುಜರಾತ್‌ನ ಗಿರ್‌ ಅರಣ್ಯದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿದ್ದದ್ದು ಒಬ್ಬರೇ ಒಬ್ಬ ಮತದಾರ. ಭರತ್‌ ದಾಸ್‌ ಬಾಪು ಎಂಬ ಏಕೈಕ ಮತದಾರನಿಗೆ ಇಲ್ಲಿ ಮತಗಟ್ಟೆ ತೆರಯಲಾಗಿತ್ತು. ನಿರೀಕ್ಷೆಯಂತೇ ಭರತ್‌ ದಶ್‌ ಬಾಪು ಅವರು ತಮ್ಮ ಹಕ್ಕು ಚಲಾಯಿಸಿದರು. ಅದರೊಂದಿಗೆ ಆ ಮತಗಟ್ಟೆಯಲ್ಲಿ ಶೇ.100 ಮತದಾನವಾಯಿತು!

ಮೋದಿ, ಶಾ ಮತದಾನ

ಮೂರನೇ ಹಂತದ ಮತದಾನದಲ್ಲಿಯೇ ಪ್ರಧಾನಿ ಮೋದಿ ಅವರೂ ಮತ ಚಲಾವಣೆಯೂ ನಡೆಯಿತು. ನರೇಂದ್ರ ಮೋದಿ ಅವರು ಅಹಮದಾಬಾದ್‌ನ ರಾನಿಪ್‌ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಇನ್ನೊಂದೆಡೆ ಅಮಿತ್‌ ಶಾ ಅವರೂ ಅಹಮದಾಬಾದ್‌ನ ನಾರನ್‌ಪುರ ಉಪ ವಿಭಾಗಿಯಾ ಕಚೇರಿಯಲ್ಲಿ ತೆರಯಲಾಗಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇದಕ್ಕೂ ಮೊದಲು ಮೋದಿ ಅವರು ಅಮಿತ್‌ ಶಾ ಕುಟುಂಬದೊಂದಿಗೆ ಮಾಧ್ಯಮಗಳಿಗೆ ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT