ನವದೆಹಲಿ: ರಾಜಧಾನಿಯಲ್ಲಿ ‘ಆಯುಷ್ಮಾನ್ ಭಾರತ್’ ಆರೋಗ್ಯ ವಿಮಾ ಯೋಜನೆಯ ಅನುಷ್ಠಾನ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ವಾಗ್ದಾಳಿ ನಡೆಸಿದೆ.

ಈ ಯೋಜನೆಯ ಜಾರಿಗೆ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ‘ರಾಜಕೀಯ ಗೋಡೆ’ ಅಡ್ಡಿಯಾಗಿದೆ ಎಂಬ ಪ್ರಧಾನಿ ಅವರ ಹೇಳಿಕೆಗೆ ಪಕ್ಷ ತಿರುಗೇಟು ನೀಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರರಾದ ಪ್ರಿಯಾಂಕಾ ಕಾಕ್ಕರ್, ‘ಆಯುಷ್ಮಾನ್ ಭಾರತ್ ಯೋಜನೆಯು ಒಂದು ಹಗರಣ. ಇದರ ಬದಲಿಗೆ ದೆಹಲಿಯ ಮಾದರಿಯನ್ನು ಪ್ರಧಾನಿ ಅಧ್ಯಯನ ಮಾಡಲಿ’ ಎಂದು ಹೇಳಿದ್ದಾರೆ.

‘ಎಎಪಿಗೆ ಆರೋಗ್ಯ ಕ್ಷೇತ್ರ ಪ್ರಮುಖವಾದುದು. ದೆಹಲಿಯಲ್ಲಿ ಪಕ್ಷವು ಜಾರಿಗೆ ತಂದಿರುವ ಆರೋಗ್ಯ ಚಿಕಿತ್ಸೆ ಕುರಿತ ಮಾದರಿಗೆ ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರೂ ಶ್ಲಾಘಿಸಿದ್ದಾರೆ. ಪ್ರಧಾನಿ ಉಲ್ಲೇಖಿಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆ ಒಂದು ಹಗರಣ ಎಂದು ಸಿಎಜಿ ವರದಿಯಲ್ಲೇ ದಾಖಲಾಗಿದೆ’ ಎಂದು ಹೇಳಿದರು.

ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಜಾರಿಗೊಳಿಸಿರುವ ಆರೋಗ್ಯ ಚಿಕಿತ್ಸೆಯ ಮಾದರಿಯನ್ನು ಪ್ರಧಾನಿ ಮೋದಿ ಅವರು ಪರಿಶೀಲಿಸಬೇಕು ಹಾಗೂ ಇಡೀ ರಾಷ್ಟ್ರಕ್ಕೆ ಅನ್ವಯಿಸುವಂತೆ ಜಾರಿಗೊಳಿಸಬೇಕು ಎಂದೂ ಒತ್ತಾಯಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ 27,000 ಸಾವಿರ ಆಸ್ಪತ್ರೆಗಳಿಗೆ ಎಂದು ಹೇಳಲಾಗಿದೆ. ಈ ಪೈಕಿ 7000 ಆಸ್ಪತ್ರೆಗಳು ಕಾಗದದಲ್ಲಿ ಮಾತ್ರವೇ ಇದೆ. ಇನ್ನೂ 4000 ಆಸ್ಪತ್ರೆಗಳು ಈ ಯೋಜನೆಯಡಿ ಒಬ್ಬ ರೋಗಿಯನ್ನು ದಾಖಲಿಸಿಕೊಂಡಿಲ್ಲ ಎಂದು ಪ್ರಿಯಾಂಕಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.