ನವದೆಹಲಿ:ಬಾಲಾಕೋಟ್ ಕಾರ್ಯಾಚರಣೆ ವೇಳೆ ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದ್ದ ‘ಸುಖೋಯ್–30ಎಂಕೆಐ’ ಯುದ್ಧ ವಿಮಾನ ಮಂಗಳವಾರ ಸಾಹಸ ಪ್ರದರ್ಶಿಸಿದೆ. ಇದು ನೆರೆ ರಾಷ್ಟ್ರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.

ಭಾರತೀಯ ವಾಯುಪಡೆ ಸ್ಥಾಪನೆಯಾದ 87ನೇ ವರ್ಷಾಚರಣೆ ನಿಮಿತ್ತ ದೆಹಲಿಯ ಹಿಂಡನ್ ವಾಯುನೆಲೆಯಲ್ಲಿ ವಿವಿಧ ಯುದ್ಧವಿಮಾನಗಳ ತಂಡಗಳು ಸಾಹಸ ಪ್ರದರ್ಶಿಸಿದವು. ಇವುಗಳಲ್ಲಿಎರಡು ‘ಸುಖೋಯ್–30ಎಂಕೆಐ’, ಮೂರು ‘ಮಿರಾಜ್–2000’ ಯುದ್ಧ ವಿಮಾನಗಳ ತಂಡವು ‘ಎವೆಂಜರ್’ ಸಾಹಸ ಪ್ರದರ್ಶಿಸಿತು.ಈ ವೇಳೆ‘ಅವೆಂಜರ್ 1’ ಸ್ಥಾನದಲ್ಲಿ ‘ಸುಖೋಯ್–30ಎಂಕೆಐ’ ಇತ್ತು. ಇದೇ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ವಿಶೇಷವೆಂದರೆ, ಬಾಲಾಕೋಟ್ ಕಾರ್ಯಾಚರಣೆ ವೇಳೆ ವಿಮಾನವನ್ನು ಮುನ್ನಡೆಸಿದ್ದ ಅದೇ ಇಬ್ಬರು ವಿಂಗ್ ಕಮಾಂಡರ್ಗಳೇ ಇಂದೂ ಸಹ ಸಾಹಸ ಪ್ರದರ್ಶಿಸಿದ್ದಾರೆ.

ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಫೆಬ್ರುವರಿ 27ರಂದು ಪಾಕಿಸ್ತಾನದ ಬಾಲಾಕೋಟ್ಗೆ ನುಗ್ಗಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಆ ಸಂದರ್ಭ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು (ಅಮೆರಿಕ ನಿರ್ಮಿತ ಯುದ್ಧವಿಮಾನ) ಭಾರತೀಯ ವಿಂಗ್ ಕಮಾಂಡರ್ಗಳು ಹೊಡೆದುರುಳಿಸಿದ್ದರು. ನಂತರ ಭಾರತದ ಮಿಗ್–21 ಅನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಆದರೆ,ಎಫ್–16 ಕಳೆದುಕೊಂಡಿರುವುದಕ್ಕೆ ಪ್ರತಿಯಾಗಿಭಾರತದ‘ಸುಖೋಯ್–30ಎಂಕೆಐ’ ವಿಮಾನವನ್ನೂ ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

ಇದನ್ನೂ ಓದಿ:ಜೆಇಎಂ ಉಗ್ರರ ಕಟ್ಟಡಗಳು ಈಗಲೂ ಸದೃಢ

‘ಬಾಲಾಕೋಟ್ ದಾಳಿಗೆ ವಾಯುಪಡೆಯ ಎಲ್ಲ ಸಿಬ್ಬಂದಿ, ಕಮಾಂಡರ್ಗಳು, ಘಟಕಗಳು ವೃತ್ತಿಪರವಾಗಿ ಕೊಡುಗೆ ನೀಡಿದ್ದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ’ ಎಂದು ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ(ಆರ್ಕೆಎಸ್ ಭದೌರಿಯಾ)ಹೇಳಿದ್ದಾರೆ.

ಇದನ್ನೂ ಓದಿ:ವಾಯುಪಡೆ ಹೊಸ ಮುಖ್ಯಸ್ಥರಾಗಿ ಆರ್ಕೆಎಸ್ ಭದೌರಿಯಾ ಅಧಿಕಾರ ಸ್ವೀಕಾರ

ಬಾಲಾಕೋಟ್ ಕಾರ್ಯಾಚರಣೆ ವೇಳೆ ‘ಮಿಗ್–21’ ಯುದ್ಧವಿಮಾನ ಮುನ್ನಡೆಸಿ, ಅದು ಪತನವಾದ ಬಳಿಕ ಪಾಕಿಸ್ತಾನದ ಸೆರೆ ಸಿಕ್ಕಿ ಬಿಡುಗಡೆಯಾಗಿ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸಹ ಇಂದು‘ಮಿಗ್–21’ರ ತಂಡವನ್ನು ಮುನ್ನಡೆಸಿದರು.

ಇನ್ನಷ್ಟು...

ಬಾಲಾಕೋಟ್ನಿಂದ ಬಂದ ಉಗ್ರರು ಹೇಳಿದ ಕಥೆ, ಮಾಡಿದ ಅನಾಹುತ

ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ

ಬಾಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ಗೆ ಪ್ರತ್ಯುತ್ತರ ನೀಡಿದ ಭಾರತ

ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’

ಪಾಕ್ ದುಸ್ಸಾಹಸ; ಹಿಮ್ಮೆಟಿಸಿದ ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.