ಬೆಂಗಳೂರು: ಅಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಎನ್ಜಿಒ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅವರಿಗೆ ವಿದೇಶ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ.

ಅಮೆರಿಕಾಗೆ ತೆರಳಲು ಉದ್ದೇಶಿಸಿದ್ದ ಆಕಾರ್ ಪಟೇಲ್ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದಿದ್ದಾರೆ.

ಅಮ್ನೆಸ್ಟಿ ಇಂಡಿಯಾ ಇಂಟರ್ನ್ಯಾಶನಲ್ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ತಮ್ಮ ವಿದೇಶ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ ಎಂದು ಆಕಾರ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಲುಕ್ ಔಟ್ ನೋಟಿಸ್ನಲ್ಲಿ ನನ್ನ ಹೆಸರಿದೆ. ಮೋದಿ ಸರ್ಕಾರ ಅಮ್ನೆಸ್ಟಿ ಇಂಡಿಯಾ ವಿರುದ್ಧ ಪ್ರಕರಣ ದಾಖಲಿಸಿರುವುದರಿಂದ, ನನ್ನ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ ಎಂದು ಪಟೇಲ್ ಹೇಳಿದ್ದಾರೆ.

ಗುಜರಾತ್ ಕೋರ್ಟ್ನಿಂದ ಪ್ರಯಾಣಕ್ಕೆ ಅನುಮತಿ ಪಡೆದಿದ್ದರೂ, ಅಮೆರಿಕಾಗೆ ತೆರಳಲು ಸಾಧ್ಯವಾಗಿಲ್ಲ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.

ಆದರೆ, ಅಮ್ನೆಸ್ಟಿ ಇಂಡಿಯಾ ವಿರುದ್ಧ ದಾಖಲಾಗಿರುವ ₹36 ಕೋಟಿ ವಿದೇಶ ದೇಣಿಗೆ ಅಕ್ರಮ ಪ್ರಕರಣದಲ್ಲಿ ಪಟೇಲ್ ಅವರ ವಿರುದ್ಧ ಲುಕ್ಔಟ್ ನೋಟಿಸ್ ಇದೆ ಎಂದು ಸಿಬಿಐ ಹೇಳಿದೆ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಕಚೇರಿ ಮೇಲೆ ಇ.ಡಿ ದಾಳಿ

ಆಕಾರ್ ಪಟೇಲ್ ಅವರು ಪ್ರಯಾಣಕ್ಕೆ ಒಡ್ಡಿರುವ ತಡೆಯನ್ನು ನಿವಾರಿಸಬೇಕು ಎಂದು ಕೋರಿ ದೆಹಲಿ ಸಿಬಿಐ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.