ವಿಜಯವಾಡ: ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರು ಜನಸೇನಾ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಂಗಳಗಿರಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಲಿನೇನಿ ಶ್ರೀನಿವಾಸ ರೆಡ್ಡಿ, ಮಾಜಿ ಶಾಸಕ ಸಾಮಿನೇನಿ ಉದಯಭಾನು, ಕಿಲಾರಿ ರೋಸಯ್ಯ ಸೇರಿದಂತೆ ಪ್ರಮುಖ ನಾಯಕರು ಜೆಎಸ್‌ಪಿಗೆ ಸೇರಿದ್ದಾರೆ.

ಇದೇ ವೇಳೆ ವಿಜಯನಗರ ಜಿಲ್ಲೆಯ ವೈಎಸ್‌ಆರ್‌ಸಿಪಿ ಯುವ ಘಟಕದ ನಾಯಕ ವಿಕ್ರಮ್ ಮತ್ತು ಅವರ ಪತ್ನಿ ಭಾವನಾ, ಉದ್ಯಮಿ ಒಂಗೋಲ್‌ನ ರವಿಶಂಕರ್ ಮತ್ತು ನೆಲ್ಲೂರಿನ ಚಲನಚಿತ್ರ ನಿರ್ಮಾಪಕ ಚಿತ್ತಮೂರು ಪ್ರವೀಣ್ ಕುಮಾರ್ ರೆಡ್ಡಿ ಕೂಡ ಜೆಎಸ್‌ಪಿಗೆ ಸೇರ್ಪಡೆಗೊಂಡಿದ್ದಾರೆ.

ವೈಎಸ್‌ಆರ್‌ಸಿಪಿ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಪವನ್ ಕಲ್ಯಾಣ್, ‘ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದ್ದಾರೆ.

ವೈಎಸ್‌ಆರ್‌ಸಿಪಿ ನಾಯಕ ಸೇರ್ಪಡೆಯಿಂದಾಗಿ ಕೃಷ್ಣ, ಗುಂಟೂರು, ಪ್ರಕಾಶಂ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜನಸೇನಾ ಪಕ್ಷಕ್ಕೆ ಬಲ ತುಂಬಲಿದೆ ಎಂದು ವಿಶ್ಲೇಷಿಸಲಾಗಿದೆ.
.ಶುದ್ಧೀಕರಣಕ್ಕಾಗಿ ದೇವರಲ್ಲಿ ಮೊರೆ– 11 ದಿನದ ದೀಕ್ಷೆ ತೊಟ್ಟ ಪವನ್ ಕಲ್ಯಾಣ್.ತಿರುಪತಿ ಲಾಡು ವಿವಾದ: ಪವನ್ ಕಲ್ಯಾಣ್ vs ಪ್ರಕಾಶ್ ರಾಜ್– ಮಾತಿನೇಟು, ಎದಿರೇಟು.Tirupati laddu Row | 'ಸನಾತನ' ಮಂಡಳಿ ಸ್ಥಾಪನೆಗೆ ಪವನ್ ಕಲ್ಯಾಣ್ ಮನವಿ.ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲವೆಂದು ಸಂಬಳ, ಭತ್ಯೆ ತ್ಯಜಿಸಿದ ಪವನ್ ಕಲ್ಯಾಣ್.ಪವನ್ ಕಲ್ಯಾಣ್ ಅವರನ್ನು ಸೋಲಿಸಲಾಗದ್ದಕ್ಕೆ ಹೆಸರು ಬದಲಿಸಿಕೊಂಡ YSRCP ನಾಯಕ.16 ವರ್ಷದ ರಾಜಕೀಯ; ಡಿಸಿಎಂ ಆಗಿಯೇ ಆಂಧ್ರ ಪ್ರದೇಶ ವಿಧಾನಸಭೆಗೆ ಬಂದ ಪವನ್ ಕಲ್ಯಾಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.