ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ನಮೀಬಿಯಾ ಚೀತಾ ಮೃತಪಟ್ಟಿದೆ.

ಮೃತ ಚೀತಾವನ್ನು ಶೌರ್ಯ ಎಂದು ಕರೆಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ಕಾರಣ ತಿಳಿದುಬರಬೇಕಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಚೀತಾ ಅಸ್ವಸ್ಥತೆಯಿಂದ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿರುವುದನ್ನು ಟ್ರ್ಯಾಕಿಂಗ್ ತಂಡ ಪತ್ತೆ ಮಾಡಿತು ಎಂದು ಲಯನ್ ಪ್ರಾಜೆಕ್ಟ್ನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ತಿಳಿಸಿದ್ದಾರೆ.

ಕುನೊದಲ್ಲಿ ನಮೀಬಿಯಾ ಚೀತಾಗಳ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಹಿಂದೆ 7 ಚೀತಾಗಳು ಹಾಗೂ ಮೂರು ಮರಿಗಳು ಮೃತಪಟ್ಟಿದ್ದವು.
.ವಿಶ್ಲೇಷಣೆ | ಕುನೊ ಉದ್ಯಾನ: ಚೀತಾಗಳ ಸಾವೇಕೆ?.ಕುನೊ ರಾಷ್ಟ್ರೀಯ ಉದ್ಯಾನವನ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.