ಜಲಂಧರ್: ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಂಜಾಬ್–ಜಮ್ಮು ಅಂತರರಾಜ್ಯ ಗಡಿಯುದ್ದಕ್ಕೂ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ಬಿಎಸ್‌ಎಫ್‌ನ ಪಂಜಾಬ್ ಗಡಿಯ ಮುಖ್ಯಸ್ಥ ಅತುಲ್ ಫುಲ್‌ಜೇಲ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಜನರಲ್ (ಐಜಿ) ಅತುಲ್ ಫುಲ್‌ಜೇಲ್ ಅವರು, ‘ಪಠಾಣ್‌ಕೋಟ್ ಜಿಲ್ಲೆಯ ಗುರುದಾಸ್‌ಪುರದ ಉದ್ದಕ್ಕೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚು ಎಚ್ಚರದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದರು.

ಮಾದಕವಸ್ತು ಕಳ್ಳಸಾಗಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ರಸ್ತೆ ಮಾರ್ಗವಾಗಿ ಕಳ್ಳಸಾಗಾಣಿಕೆ ಸಾಧ್ಯವಿಲ್ಲ, ಆದರೆ ಡ್ರೋನ್ ಮೂಲಕ ಅಕ್ರಮ ನಡೆಯುತ್ತಿದೆ’ ಎಂದರು.

‘ದೊಡ್ಡ ದೊಡ್ಡ ಡ್ರೋನ್‌ಗಳ ಮೂಲಕ ಕಳ್ಳಸಾಗಣೆಯು ಕಳೆದ ವರ್ಷ ಅಕ್ಟೋಬರ್‌ನಿಂದ ನಿಂತಿದೆ. ಆದರೆ ಈಗ ಸಣ್ಣ ಡ್ರೋನ್ ಮೂಲಕ ಅವ್ಯವಹಾರ ನಡೆಯುತ್ತಿದೆ. ಅವುಗಳ ಶಬ್ದವೂ ಕಡಿಮೆ ಇರುತ್ತದೆ, ಕಣ್ಣಿಗೂ ಗೋಚರವಾಗುವುದಿಲ್ಲ’ ಎಂದು ಹೇಳಿದರು.

‘ಕಿಲೋಮೀಟರ್‌ಗಟ್ಟಲೆ ಎತ್ತರದಲ್ಲಿ ಅವು ಹಾರಾಡುವುದರಿಂದ ಹೊಡೆದುರುಳಿಸುವುದೂ ಕಷ್ಟ. ಆದಾಗ್ಯೂ ಸಾಕಷ್ಟು ಡ್ರೋನ್‌ಗಳನ್ನು ಸೈನಿಕರು ಹೊಡೆದುರುಳಿಸಿದ್ದಾರೆ’ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 10ರಿಂದಲೇ ಪಂಜಾಬ್ ಗಡಿಯ 553 ಕಿ.ಮೀ. ಉದ್ದಕ್ಕೂ ಭದ್ರತೆಯನ್ನು ಹೆಚ್ಚಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.