ದೆಹಲಿ: ಭಾರತ್ ನೆಟ್ ಯೋಜನೆಯಡಿ ಬಿಎಸ್ಎನ್ಎಲ್ ಹಾಕಿರುವ 2.86 ಲಕ್ಷ ಕಿಲೊಮೀಟರ್ ಉದ್ದದ ಆಪ್ಟಿಕಲ್ ಫೈಬರ್ ಮತ್ತು 14,917 ಮೊಬೈಲ್ ಟವರ್ಗಳನ್ನು ನಗದೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳ ಸಂಘ ಗುರುವಾರ ವಿರೋಧಿಸಿದೆ.

ಟವರ್ಗಳ ಮಾರಾಟವು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ನ ಖಾಸಗೀಕರಣದ ಆರಂಭ ಎಂದು ನೌಕರರ ಸಂಘವು ಹೇಳಿದೆ. ಈ ಸ್ವತ್ತುಗಳ ನಗದೀಕರಣಕ್ಕೆ ಅವಕಾಶ ನೀಡಿದರೆ, ಸರ್ಕಾರದ ಮುಂದಿನ ಗುರಿ 7 ಲಕ್ಷ ಕಿಲೋಮೀಟರ್ ಉದ್ದದ ಆಪ್ಟಿಕ್ ಫೈಬರ್ ಅನ್ನೂ ನಗದೀಕರಣ ಮಾಡುವುದೇ ಆಗಿರುತ್ತದೆ ಎಂದು ನೌಕರರ ಸಂಘ ಆತಂಕ ವ್ಯಕ್ತಪಡಿಸಿದೆ.

ಬಿಎಸ್ಎನ್ಎಲ್ನ ಎಲ್ಲ ಉದ್ಯೋಗಿಗಳು ಶುಕ್ರವಾರ ಪ್ರತಿಭಟನೆ ನಡೆಸಬೇಕು ಎಂದು ಸಂಘ ತಿಳಿಸಿದೆ.

ಭಾರತ ನೆಟ್ ಫೈಬರ್ ಸ್ವತ್ತು ಮತ್ತು ಬಿಎಸ್ಎನ್ಎಲ್–ಎಂಟಿಎನ್ಎಲ್ನ 14,917 ಮೊಬೈಲ್ ಟವರ್ಗಳ ಭಾಗಶಃ ನಗದೀಕರಣದಿಂದ ₹35,100 ಕೋಟಿಯನ್ನು ಸಂಗ್ರಹಿಸುವ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಇದು ‘ನ್ಯಾಷನಲ್ ಮಾನಿಟೈಸೈಷನ್ ಪೈಪ್ಲೈನ್’ ಅಡಿಯಲ್ಲಿ 6 ಲಕ್ಷ ಕೋಟಿ ಸಂಗ್ರಹಿಸುವ ಯೋಜನೆಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.