ಹೈದರಾಬಾದ್: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಹಿಂದೂ ಸಮುದಾಯದವರ ಭದ್ರತೆಗಾಗಿ ಕನೆಡಾ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜಾಗತಿಕವಾಗಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಸುಲಭವಾಗಿ ಗುರಿಯಾಗುತ್ತಿದ್ದಾರೆ. ಅವರ ವಿರುದ್ಧದ ದ್ವೇಷದ ಕೃತ್ಯ, ನಿಂದನೆಯ ಪ್ರತಿಯೊಂದು ನಿದರ್ಶನವು ಮಾನವೀಯತೆ ಮತ್ತು ಶಾಂತಿಯನ್ನು ಪಾಲಿಸುವ ಎಲ್ಲರಿಗೂ ಹೊಡೆತವಾಗಿದೆ’ ಎಂದು ಹೇಳಿದ್ದಾರೆ.

‘ಪಾಕಿಸ್ತಾನ, ಅಘ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಂತಹ ಸ್ಥಳಗಳಲ್ಲಿ ನಮ್ಮ ಹಿಂದೂ ಸಹೋದರ, ಸಹೋದರಿಯರು ಹಿಂಸಾಚಾರ, ಕಿರುಕುಳ ಮತ್ತು ಊಹಿಸಲಾಗದ ಸಂಕಟವನ್ನು ಅನುಭವಿಸುತ್ತಿರುವುದು ನೋಡಿ ನನಗೆ ತುಂಬಾ ನೋವಾಗಿದೆ’ ಎಂದು ಹೇಳಿದ್ದಾರೆ.

‘ಇದೊಂದೇ ಘಟನೆಯಲ್ಲ.. ವಿವಿಧ ದೇಶಗಳಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಮತ್ತು ಉದ್ದೇಶಿತ ಕೃತ್ಯಗಳು ಹೆಚ್ಚುತ್ತಿವೆ. ಆದರೂ ಜಾಗತಿಕ ನಾಯಕರು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ‘ಶಾಂತಿ ಪ್ರಿಯ’ ಎನ್ಜಿಒಗಳು ಕಿವುಡಾಗಿವೆ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.