ನವದೆಹಲಿ: ದೇಶದ 500ಕ್ಕೂ ಹೆಚ್ಚು ಶಾಲೆಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಕೆಲ ವಿಷಯಗಳಲ್ಲಿ ನೀಡಲಾಗಿರುವ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷಾ ಅಂಕಗಳ ನಡುವೆ ಗಮನಾರ್ಹ ವ್ಯತ್ಯಾಸ ಇರುವುದನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪತ್ತೆ ಹಚ್ಚಿದೆ.

ಇದನ್ನು ಆಧರಿಸಿ ಆಂತರಿಕ ಮೌಲ್ಯಮಾಪನ ಕಾರ್ಯವಿಧಾನಗಳನ್ನು ಪರಿಶೀಲಿಸುವಂತೆ ಮಂಡಳಿಯು ಸಂಬಂಧಿಸಿದ ಶಾಲೆಗಳಿಗೆ ಸಲಹೆ ನೀಡಿದೆ.

ಪ್ರಾಯೋಗಿಕ ಪರೀಕ್ಷೆಗಳನ್ನು ಮೌಲ್ಯಮಾಪನ ಮಾಡುವಾಗ ನ್ಯಾಯಸಮ್ಮತ ಮತ್ತು ನಿಖರತೆಗೆ ಒತ್ತು ನೀಡಬೇಕು. ಈ ಪ್ರಕ್ರಿಯೆಯು ವಾಸ್ತವಿಕವಾಗಿರಬೇಕು ಎಂದೂ ಅದು ಹೇಳಿದೆ.

‘ಸಿಬಿಎಸ್‌ಇ ಸುಧಾರಿತ ಎಐ ಪರಿಕರಗಳ ಮೂಲಕ, ಕಳೆದ ವರ್ಷಗಳ ಫಲಿತಾಂಶದ ಅಂಕಿ ಅಂಶಗಳನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಈ ವಿಷಯ ಗೊತ್ತಾಯಿತು’ ಎಂದು ಮಂಡಳಿಯ ಕಾರ್ಯದರ್ಶಿ ಹಿಮಾಂಶು ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.